ಕಸದಿಂದ ಕಾಸು ಮಾಡಲು ಹೊರಟ ಬಿಬಿಎಂಪಿ! - Mahanayaka

ಕಸದಿಂದ ಕಾಸು ಮಾಡಲು ಹೊರಟ ಬಿಬಿಎಂಪಿ!

16/12/2020

ಬೆಂಗಳೂರು: ಕರೆಂಟ್ ಬಿಲ್, ನೀರಿನ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಷ್ಟದಲ್ಲಿ ಜನರಿದ್ದರೆ, ಇತ್ತ ಬಿಬಿಎಂಪಿ ಜನವರಿ 1ರ ನಂತರ ಕಸಕ್ಕೂ ಶುಲ್ಕ ಹಾಕಲು ಮುಂದಾಗಿದ್ದು,  ಕಾಸದಿಂದ ನಾಲ್ಕು ಕಾಸು ಸಂಪಾದನೆ ಮಾಡುವ ದುರ್ಗತಿಯನ್ನು ಬಿಬಿಎಂಪಿ ಪ್ರದರ್ಶಿಸಿದೆ.

ಇನ್ನು ಬೆಂಗಳೂರಿನ ಪ್ರತಿ ಮನೆಯವರೂ ಕಸ ವಿಲೇವಾರಿಗಾಗಿ ತಿಂಗಳಿಗೆ 200 ರೂಪಾಯಿ ಪಾವತಿ ಮಾಡಬೇಕಿದೆ. ಕಸದ ಗಾತ್ರಕ್ಕೆ ತಕ್ಕ ಹಾಗೆ ಬಿಬಿಎಂಪಿ ಶುಲ್ಕ ವಿಧಿಸಲು ಮುಂದಾಗಿದೆ. ಕಸಕ್ಕೆ ಗರಿಷ್ಠ 14 ಸಾವಿರ ರೂಪಾಯಿಗಳ ವರೆಗೆ ಶುಲ್ಕ ವಿಧಿಸಲು ಬಿಬಿಎಂಪಿ ಮುಂದಾಗಿದೆ.  2021ರ ಜನವರಿ 1ರಿಂದ ಈ ನಿಯಮ ಜಾರಿಯಾಗಲಿದೆ.

ವಸತಿ ಕಟ್ಟಡದ 1000 ಚದರಡಿಗೆ 10 ರೂಪಾಯಿ, ವಸತಿ ಕಟ್ಟಡದ 1001 ರಿಂದ 3000 ಚದರಡಿಗೆ 30 ರೂಪಾಯಿ, ವಸತಿ ಕಟ್ಟಡದ 3000ಕ್ಕೂ ಮೇಲ್ಪಟ್ಟ ಚದರಡಿಗೆ 50 ರೂಪಾಯಿ, ವಾಣಿಜ್ಯ ಕಟ್ಟಡದ 1000 ಚದರಡಿಗೆ 50 ರೂಪಾಯಿ, ವಾಣಿಜ್ಯ ಕಟ್ಟಡದ 1001 ರಿಂದ 5000 ಚದರಡಿಗೆ 100 ರೂಪಾಯಿ, ವಾಣಿಜ್ಯ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 200 ರೂಪಾಯಿ, ಕೈಗಾರಿಕಾ ಕಟ್ಟಡದ 1000 ಚದರಡಿಗೆ 50 ರೂಪಾಯಿ, ಕೈಗಾರಿಕಾ ಕಟ್ಟಡದ 1001ರಿಂದ 5000 ಚದರಡಿಗೆ 200 ರೂಪಾಯಿ, ಕೈಗಾರಿಕಾ ಕಟ್ಟಡದ 5000ಕ್ಕೂ ಮೇಲ್ಪಟ್ಟ ಚದರಡಿಗೆ 300 ರೂಪಾಯಿಗಳನ್ನು ಬಿಬಿಎಂಪಿ ವಿಧಿಸಲು ಮುಂದಾಗಿದೆ.


Provided by

ಇತ್ತೀಚಿನ ಸುದ್ದಿ