ರೇಣುಕಾಚಾರ್ಯ ಮೇಲೆ ದಾಳಿ ಮಾಡಲು ಯತ್ನಿಸಿದ ಆಂಜನೇಯ ! - Mahanayaka

ರೇಣುಕಾಚಾರ್ಯ ಮೇಲೆ ದಾಳಿ ಮಾಡಲು ಯತ್ನಿಸಿದ ಆಂಜನೇಯ !

16/12/2020

ದಾವಣಗೆರೆ: ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಮೇಲೆ ಕೋತಿಯೊಂದು  ದಾಳಿ ಮಾಡಲು ಯತ್ನಿಸಿದ ಘಟನೆ ಹೊನ್ನಾಳಿ ಪಟ್ಟಣದಲ್ಲಿ ನಡೆದಿದ್ದು, ಸ್ವಲ್ಪದರಲ್ಲೇ ಅವರು ಪಾರಾಗಿದ್ದಾರೆ.


Provided by

ತಮ್ಮ ಬೆಂಬಲಿಗರ ಜೊತೆಗೆ ಹೊನ್ನಾಳಿ ಪಟ್ಟಣದ ತಾಲೂಕು ಕಚೇರಿ ಸಮೀಪ ನಿಂತುಕೊಂಡು ಮಾತನಾಡುತ್ತಿದ್ದ ವೇಳೆ ಕೋತಿಯೊಂದು ರೇಣುಕಾಚಾರ್ಯ ಅವರನ್ನು ನೋಡಿ ಆಕ್ರೋಶಿತವಾಗಿದ್ದು, ಅವರ ಮೇಲೆ ದಾಳಿಗೆ ಮುಂದಾಗಿದೆ. ಈ ವೇಳೆ ಜೊತೆಗಾರರು ಸ್ಥಳದಿಂದ ಕೋತಿಯನ್ನು ಓಡಿಸಿ ರೇಣುಕಾಚಾರ್ಯ ಅವರನ್ನು ಪಾರು ಮಾಡಿದ್ದಾರೆ.

ಎರಡು ತಿಂಗಳಿನಿಂದ ಕೋತಿ ಜನತೆಯಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದು, ಸಿಕ್ಕ ಸಿಕ್ಕವರ ಮೇಲೆ ಹಾರುವುದು, ಎಗರುವುದು ಅವರ ಬಳಿ ಇರುವ ವಸ್ತಗಳನ್ನು ಕಿತ್ತುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ಕೋತಿಯ ಈ ಆಟಕ್ಕೆ ಜನತೆ ಬೇಸತ್ತಿದ್ದು, ಕೂಡಲೇ ಜನತೆಗೆ ಉಪಟಳವನ್ನು ನೀಡುತ್ತಿರುವ ಈ ಕೋತಿಯನ್ನು ಹಿಡಿದು ಕಾಡಿಗೆ ಬಿಡಬೇಕು ಅಂತ ಸ್ಥಳೀಯ ಅಡಳಿತಕ್ಕೆ ಹಾಗೂ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿ