ಹಾವು ಕಡಿದು ಖ್ಯಾತ ಉರಗ ತಜ್ಞ ನಿಧನ | ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಉರಗ ತಜ್ಞ ಸಾವು - Mahanayaka

ಹಾವು ಕಡಿದು ಖ್ಯಾತ ಉರಗ ತಜ್ಞ ನಿಧನ | ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಉರಗ ತಜ್ಞ ಸಾವು

15/12/2020

ಬಾಗಲಕೋಟೆ: ಸಾವಿರಾರು ಹಾವುಗಳನ್ನು ರಕ್ಷಣೆ ಮಾಡಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಅವರು ಹಾವೊಂದು ಕಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ನಿಧನರಾಗಿದ್ದಾರೆ.


Provided by

 

ಇಲ್ಲಿನ ಸಿಕ್ಕೇರಿ ಕ್ರಾಸ್ ನಲ್ಲಿ ಹಾವು ಹಿಡಿಯಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಹಾವು ಕಡಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 

ಡೇನಿಯಲ್ ಒಂದು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಸಾವಿರಾರು ಹಾವುಗಳನ್ನು ಹಿಡಿದು ರಕ್ಷಣೆ ಮಾಡಿದ್ದ ಅವರು ಇದೀಗ ಹಾವಿನಿಂದಲೇ ಸಾವಿಗೀಡಾಗಿದ್ದಾರೆ. ಊರಿನಲ್ಲಿ ಯಾರೇ ಆದರೂ ಹಾವು ಹಿಡಿಯಲು ಕರೆದರೆ ತಕ್ಷಣವೇ ತೆರಳುತ್ತಿದ್ದ ಡೇನಿಯಲ್ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹಾವನ್ನು ಹಿಡಿಯುತ್ತಿದ್ದರು.

 

ಎರಡು ತಿಂಗಳ ಹಿಂದೆಯೂ ಅವರಿಗೆ ಹಾವು ಕಡಿದಿತ್ತು. ಆ ವೇಳೆ ಸತತ ಒಂದು ವಾರಗಳ ಕಾಲ ಅವರು ಸಾವು ಬದುಕಿನ ನಡುವೆ ಹೋರಾಡಿ ಬಳಿಕ ಚೇತರಿಸಿಕೊಂಡಿದ್ದರು. ಇದಾದ ಬಳಿಕ ಅವರಿಗೆ ಮತ್ತೆ ಹಾವು ಕಚ್ಚಿದೆ.

 

ಸಾಂದರ್ಭಿಕ ಚಿತ್ರ

ಇತ್ತೀಚಿನ ಸುದ್ದಿ