ಶಾಕಿಂಗ್ ನ್ಯೂಸ್:  ಕತ್ತೆಯ ಸೆಗಣಿ ಬಳಸಿ ಮಸಾಲೆ ಪದಾರ್ಥಗಳ ತಯಾರಿಕೆ! - Mahanayaka
4:49 AM Wednesday 6 - December 2023

ಶಾಕಿಂಗ್ ನ್ಯೂಸ್:  ಕತ್ತೆಯ ಸೆಗಣಿ ಬಳಸಿ ಮಸಾಲೆ ಪದಾರ್ಥಗಳ ತಯಾರಿಕೆ!

16/12/2020

ಹತ್ರಾಸ್:  ಇಂದಿನ ದಿನಗಳಲ್ಲಿ ಅಡುಗೆ ಮಾಡಲು ಖಾರದ ಪುಡಿ, ಅರಸಿನ ಪುಡಿ ,  ಕೊತ್ತಂಬರಿ ಹುಡಿಯನ್ನು ಹೆಚ್ಚಾಗಿ  ಬಳಸುತ್ತಾರೆ. ಆದರೆ  ಈ ಹುಡಿಗಳನ್ನು ಯಾವ ರೀತಿ  ತಯಾರಿಸುತ್ತಾರೆ  ಎಲ್ಲಿ ತಯಾರಿಸುತ್ತಾರೆ  ಎಂದು ತಿಳಿದುಕೊಳ್ಳುವುದು  ಅವಶ್ಯಕವಾಗಿದೆ.

ಉತ್ತರಪ್ರದೇಶದ ಹತ್ರಾಸ್  ಜಿಲ್ಲೆಯ ನವೀಪುರ ಪ್ರದೇಶ ಪೋಲಿಸರು ಮಸಾಲೆಯ ಉತ್ಪಾದನೆ  ಘಟಕದ ಮೇಲೆ ದಾಳಿ ನಡೆಸಿ ಕಾರ್ಖಾನೆ ಮಾಲಿಕ  ಅನುಪ್ ಎಂಬಾತನನ್ನು ಬಂಧಿಸಿದ್ದು,  ಕಾರ್ಖಾನೆಯನ್ನು ಸೀಝ್  ಮಾಡಿದ್ದಾರೆ. ಅಲ್ಲದೇ  ಖಾರದ ಪುಡಿ, ಗರಂ ಮಸಾಲಾ, ಕೊತ್ತಂಬರಿ ಪುಡಿ, ಅರಿಶಿಣ ಸೇರಿದಂತೆ ಅನೇಕ ಮಸಾಲೆ ಪದಾರ್ಥಗಳನ್ನ ವಶಕ್ಕೆ ಪಡೆದಿದ್ದಾರೆ.

ಈ ಎಲ್ಲ ಮಸಾಲೆ ಪದಾರ್ಥಗಳಿಗೆ ಕತ್ತೆಯ ಸೆಗಣಿ, ಕೃತಕ ಬಣ್ಣ ಆಸಿಡ್ ಗಳನ್ನು ಕಲಬೆರಕೆ ಮಾಡಲಾಗುತ್ತಿತ್ತು. ಈ ಕಾರ್ಖಾನೆಯಿಂದ 27 ಮಾದರಿಗಳನ್ನ ಸಂಗ್ರಹಿಸಿರುವ ಪೊಲೀಸರು ಅವೆಲ್ಲವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

ಈ ಸಂದರ್ಭ  ಕಾರ್ಖಾನೆಯಲ್ಲಿದ್ದ 300 ಕೆ.ಜಿ.ಗೂ ಅಧಿಕ ಮಸಾಲೆಯನ್ನು ವಶಪಡಿಸಲಾಗಿದೆ. ಪರೀಕ್ಷಾ ವರದಿಯ ಫಲಿತಾಂಶವನ್ನ ಆದರಿಸಿ ಕಾರ್ಖಾನೆ ಮಾಲಿಕರ ವಿರುದ್ಧ  ಪ್ರಕರಣ ದಾಖಲಾಗಲಿದೆ.

ಇತ್ತೀಚಿನ ಸುದ್ದಿ