ಶಾಕಿಂಗ್ ನ್ಯೂಸ್: ಸತೀಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಗುಂಡಿನ ದಾಳಿ - Mahanayaka
9:50 PM Wednesday 11 - September 2024

ಶಾಕಿಂಗ್ ನ್ಯೂಸ್: ಸತೀಶ್ ಜಾರಕಿಹೊಳಿ ಬೆಂಬಲಿಗರ ಮೇಲೆ ಗುಂಡಿನ ದಾಳಿ

17/12/2020

ಹುಕ್ಕೇರಿ: ಶಾಸಕ ಸತೀಶ್ ಜಾರಕಿಹೊಳಿ ಆಪ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತರಿಬ್ಬರು ಗುಂಡಿನ ದಾಳಿ ನಡೆಸಿದ ಘಟನೆ ಇಲ್ಲಿನ ಯಮಕನಮರಡಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ಕಿರಣ್, ಭರಮಾ ದೂಪದಾಳೆ ಗುಂಡಿನ ದಾಳಿಗೊಳಗಾದವರಾಗಿದ್ದಾರೆ. ಈ ಪೈಕಿ ಭರಮಾ ದೂಪದಾಳೆ ಗಾಯಗೊಂಡಿದ್ದು, ಕಿರಣ್ ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂದು ವರದಿಯಾಗಿದೆ.  ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಇಬ್ಬರು ಅಪರಿಚಿತರು ಈ ಗುಂಡಿನ ದಾಳಿ ನಡೆಸಿದ್ದಾರೆ.


Provided by

ದುಷ್ಕರ್ಮಿಗಳು ಮಾಸ್ಕ್ ಧರಿಸಿ ಬಂದಿದ್ದು, ಸಂತ್ರಸ್ತರು ಇಲ್ಲಿನ ದೇವಸ್ಥಾನದ ಕಟ್ಟೆಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ದಾಳಿ ನಡೆಸಲಾಗಿದೆ. ಗ್ರಾಮಪಂಚಾಯತ್ ಚುನಾವಣೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ