ಚಿತ್ರದುರ್ಗ ಜಿಲ್ಲಾ ಪೊಲೀಸ್ ಎಕ್ಸ್ ಖಾತೆ  ಹ್ಯಾಕ್ - Mahanayaka

ಚಿತ್ರದುರ್ಗ ಜಿಲ್ಲಾ ಪೊಲೀಸ್ ಎಕ್ಸ್ ಖಾತೆ  ಹ್ಯಾಕ್

cyber police
06/01/2025

ಚಿತ್ರದುರ್ಗ: ಹ್ಯಾಕರ್ಸ್ ಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಜನಸಾಮಾನ್ಯರು ಆತಂಕದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಎಕ್ಸ್ ಖಾತೆಯನ್ನೇ ಖದೀಮರು ಹ್ಯಾಕ್ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಜಿಲ್ಲಾ ಪೊಲೀಸ್ ಅಕೌಂಟ್ ಹ್ಯಾಕ್(Hack) ಮಾಡಿರುವ ಸೈಬರ್ ಕಳ್ಳರು, ಆ ಖಾತೆಯಿಂದ ಬಿಟ್ ಕಾಯಿನ್ ಜಾಹೀರಾತು ಪೋಸ್ಟ್ ಮಾಡಿದ್ದಾರೆ. ಇದರಿಂದ ಅಲರ್ಟ್ ಆದ ಪೊಲೀಸ್ ಇಲಾಖೆ, ಖಾತೆಯನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸಿದೆ. ಘಟನೆ ಸಂಬಂಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರಿಶೀಲನೆ ಬಳಿಕ ಎಕ್ಸ್ ಖಾತೆನ್ನು ಸಕ್ರಿಯಗೊಳಿಸಲಾಗಿದೆ. ಬಳಿಕ ಹ್ಯಾಕ್ ಆಗಿರುವ ವಿಚಾರವನ್ನು  ಮಾಹಿತಿಗಾಗಿ ಶೇರ್ ಮಾಡಿದೆ.

ಸೈಬರ್ ಕಳ್ಳರ ನಿಯಂತ್ರಣ ಕಷ್ಟ ಸಾಧ್ಯವಾದಂತಿದೆ. ಜಾಗೃತಿ ಮೂಡಿಸುವ ಕೆಲಸದ ಜೊತೆಗೆ ಸೈಬರ್ ಕಳ್ಳರನ್ನ ಪತ್ತೆ ಹಚ್ಚುವ ಕೆಲಸ ಸೈಬರ್ ಪೊಲೀಸರಿಂದಾಗಬೇಕು. ಸಾಕಷ್ಟು ಜನರು ಈಗಾಗಲೇ ಸೈಬರ್ ವಂಚನೆಗೊಳಗಾಗಿ ಲಕ್ಷಾಂತರ, ಕೋಟ್ಯಂತರ ಹಣವನ್ನು ಕಳೆದುಕೊಂಡಿದ್ದಾರೆ. ಅಮಾಯಕ ಜನರನ್ನು ಮಾತ್ರವಲ್ಲ ಪ್ರಮುಖ ಇಲಾಖೆಗಳ ಖಾತೆಗಳಿಗೂ ಸೈಬರ್ ಕಳ್ಳರು ಕನ್ನ ಹಾಕುತ್ತಿದ್ದಾರೆ. ಹೀಗಾಗಿ ಸೈಬರ್ ಪೊಲೀಸ್ ಇಲಾಖೆಗೆ ಸರ್ಕಾರ ಹೆಚ್ಚಿನ ಒತ್ತು ನೀಡಬೇಕಿದೆ. ಸೈಬರ್ ಕಳ್ಳರ ವಿರುದ್ಧ ಹೋರಾಡಲು ಸೈಬರ್ ಪೊಲೀಸರಿಗೆ ಸರ್ಕಾರ ಹೆಚ್ಚಿನ ಬಲತುಂಬಬೇಕು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ