ಬಣ್ಣ ಬದಲಿಸಿದ ಡಿಡಿ ನ್ಯೂಸ್ : ಇನ್ನು ಮುಂದೆ ಕೇಸರಿ ಲೋಗೋ! - Mahanayaka

ಬಣ್ಣ ಬದಲಿಸಿದ ಡಿಡಿ ನ್ಯೂಸ್ : ಇನ್ನು ಮುಂದೆ ಕೇಸರಿ ಲೋಗೋ!

dd news
19/04/2024

ನವದೆಹಲಿ: ಭಾರತ ಸರ್ಕಾರ ಸ್ವಾಮ್ಯದ ರಾಷ್ಟ್ರೀಯ ಸುದ್ದಿ ಪ್ರಸಾರ ಸಂಸ್ಥೆ ಡಿಡಿ ನ್ಯೂಸ್ ತನ್ನ ಲೋಗೋದ ಬಣ್ಣವನ್ನು ಕೆಂಪು ಬಣ್ಣದಿಂದ ಕೇಸರಿ ಬಣ್ಣಕ್ಕೆ ಬದಲಿಸಿದ್ದು, ಹೊಸ ರೂಪದಲ್ಲಿ ಇನ್ನು ಮುಂದೆ ಸುದ್ದಿ ಚಾನೆಲ್ ಪ್ರಸಾರವಾಗಲಿದೆ. ಆದ್ರೆ, ಮೌಲ್ಯಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಡಿ ನ್ಯೂಸ್ ಹೇಳಿಕೊಂಡಿದೆ.

ಡಿಡಿ ನ್ಯೂಸ್ ನ ಲಾಂಛನ ಮತ್ತು ಅದರ ಕೆಳಗೆ ನ್ಯೂಸ್ ಎಂಬ ಹಿಂದಿ ಪದ ಹಾಗೆಯೇ ಇದ್ದು, ಬಣ್ಣ ಮಾತ್ರ ಬದಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮಾಂಟೇಜ್ ಅನ್ನು ಡಿಡಿ ನ್ಯೂಸ್ ಟ್ವೀಟ್ ಮಾಡಿದ್ದು, ಅದರಲ್ಲಿ ವಿಶಿಷ್ಟ ಸ್ಟುಡಿಯೋದ ಚಿತ್ರಣವನ್ನೂ ಒದಗಿಸಿದೆ. ಸುಧಾರಿತ ವೆಬ್ ಸೈಟ್ ವಿವರವೂ ಇದೆ.

“ನಮ್ಮ ಮೌಲ್ಯಗಳನ್ನು ಹಾಗೆಯೆ ಉಳಿಸಿಕೊಂಡು, ನಾವು ಈಗ ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರುತ್ತಿದ್ದೇವೆ . ಹಿಂದೆಂದೂ ಇಲ್ಲದಂತಹ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ.. ಹೊಸ ಡಿಡಿ ನ್ಯೂಸ್ ಅನ್ನು ವೀಕ್ಷಿಸಿ! ನಾವು ಕ್ಷಿಪ್ರವಾಗಿ, ತರಾತುರಿಯಲ್ಲಿ ಸುದ್ದಿ ಪ್ರಸಾರ ಮಾಡುವುದಿಲ್ಲ.


Provided by

ಅತಿಯಾದ ಸಂವೇದನೆಯೊಂದಿಗೆ ಸುದ್ದಿ ನೀಡುವ ಬದಲಾಗಿ ವಾಸ್ತವದ ವರದಿಯನ್ನು ಪ್ರಸಾರ ಮಾಡುತ್ತೇವೆ. ಡಿಡಿ ನ್ಯೂಸ್ ನಲ್ಲಿ ಸುದ್ದಿ ಪ್ರಸಾರವಾಗುತ್ತದೆ ಎಂದಾದರೆ ಅದು ಸತ್ಯ!” ಎಂದು ಡಿಡಿ ನ್ಯೂಸ್ ಈ ವಿಡಿಯೋದೊಂದಿಗೆ ಸ್ಟೇಟಸ್ ಅಪ್ಡೇಟ್ ಮಾಡಿದೆ.

ಡಿಡಿ ನ್ಯೂಸ್ ಏಪ್ರಿಲ್ 16ರಂದು ಬೆಳಗ್ಗೆ ಈ ಟ್ವೀಟ್ ಮಾಡಿದ್ದು, ಲಾಂಛನದ ಬಣ್ಣ ಬದಲಾವಣೆ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ. ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಕೂಡ ಬಳಸುತ್ತಿರುವ ಬಣ್ಣ ಕೇಸರಿಯಾಗಿದ್ದು, ಈ ಲಾಂಛನದ ಬಣ್ಣ ಬದಲಾವಣೆಗೆ ಟೀಕೆಗೆ ಗುರಿಯಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ