ದ್ವೇಷ ಭಾಷಣ ಆರೋಪ: ಅಸ್ಸಾಂ ಸಿಎಂ ವಿರುದ್ಧ ಕಾಂಗ್ರೆಸ್ ನಿಂದ ದೂರು
ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ವಿಶ್ವ ಶರ್ಮ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ನವೆಂಬರ್ ಒಂದರಂದು ಜಾರ್ಖಂಡ್ ನಲ್ಲಿ ಅವರು ನಡೆಸಿದ ಭಾಷಣವು ದ್ವೇಷದಿಂದ ಮತ್ತು ವಿಭಜನಕಾರಿ ಮಾತುಗಳಿಂದ ಕೂಡಿತ್ತು ಹಾಗೂ ಮುಸ್ಲಿಮರನ್ನು ಗುರಿ ಮಾಡಲಾಗಿತ್ತು ಎಂದು ಪಕ್ಷ ಆರೋಪಿಸಿದೆ.
ಆ ಜನರು ಒಂದೇ ಕಡೆ ಓಟು ಹಾಕುತ್ತಾರೆ, ಹಿಂದುಗಳಾದ ನಾವಾದರೋ ಅರ್ಧ ಇಲ್ಲಿಗೆ ಓಟು ಹಾಕುತ್ತೇವೆ ಅರ್ಧ ಅಲ್ಲಿಗೆ ಓಟು ಹಾಕುತ್ತೇವೆ ಹೇಮಂತ್ ವಿಶ್ವಶರ್ಮ ಅವರು ಚುನಾವಣಾ ಭಾಷಣದಲ್ಲಿ ಹೇಳಿಕೆ ನೀಡಿದ್ದರು. ಹಾಗೆಯೇ,
ಈ ಸರ್ಕಾರವು ನುಸುಳು ಕೋರರನ್ನು ರಾಜ್ಯಕ್ಕೆ ಆಹ್ವಾನಿಸುತ್ತಾ ಇದೆ, ಯಾಕೆಂದರೆ ಒಂದು ನಿರ್ದಿಷ್ಟ ಸಮುದಾಯವು ಅವರಿಗೆ ವೋಟು ಹಾಕುತ್ತಿದೆ ಎಂದು ಕೂಡ ಅವರು ಹೇಳಿದ್ದರು.
ಸಮಾಜವನ್ನು ಹಿಂದೂ ಮುಸ್ಲಿಂ ಆಗಿ ವಿಭಜಿಸುವ ಅವರ ದುರುದ್ದೇಶಕ್ಕೆ ಇದೊಂದು ಒಳ್ಳೆಯ ಉದಾಹರಣೆ ಎಂದು ಕಾಂಗ್ರೆಸ್ಸಿನ ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ತಕ್ಷಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಲಾಗಿದೆ.
ಝಾರ್ಖಂಡ್ ಸರಕಾರವು ಅಲಂಗೀರ, ಆಲಂ ಮತ್ತು ಇರ್ಫಾನ್ ಅನ್ಸಾರಿಯ ಯಂಥವರ ಸರ್ಕಾರವಾಗಿದೆ ಎಂದು ಕೂಡ ಶರ್ಮ ಹೇಳಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj