ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಿ | ಡಿ.ಕೆ.ಶಿವಕುಮಾರ್ ಲೇವಡಿ - Mahanayaka
9:59 PM Tuesday 27 - September 2022

ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಿ | ಡಿ.ಕೆ.ಶಿವಕುಮಾರ್ ಲೇವಡಿ

d k shivakumar
26/08/2021

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಡೆದ ವಿದ್ಯಾರ್ಥಿನಿಯ  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಕೆಪಿಸಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ನನ್ನನ್ನು ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಅರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ  ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಗೃಹ ಸಚಿವರನ್ನು ರೇಪ್ ಮಾಡಿದವರ ಮೇಲೆ ಕೇಸ್ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.

ರೇಪ್ ಎನ್ನುವುದು ಗೃಹ ಸಚಿವರಿಗೆ ಪ್ರಿಯವಾದ ಪದ ಎಂದ ಡಿ.ಕೆ.ಶಿವಕುಮಾರ್,  ಗೃಹ ಸಚಿವರನ್ನು ರೇಪ್ ಮಾಡಿದ ಕಾಂಗ್ರೆಸ್ ನಾಯಕರ ಮೇಲೆ ಕೇಸ್ ಮಾಡಲಿ. 376ರ ಅಡಿಯಲ್ಲಿ ಕೂಡಲೇ ಕೇಸ್ ದಾಖಲಿಸಲಿ. ರೇವಣ್ಣ ರೇಪ್ ಮಾಡಿದ್ದರೆ ಅವರ ಮೇಲೆ ಕೇಸ್ ಹಾಕಿ. ನಾನು ರೇಪ್ ಮಾಡಿದ್ದರೆ, ನನ್ನ ಮೇಲೆ ಕೇಸ್ ಹಾಕಲಿ. ಸಿದ್ದರಾಮಯ್ಯ ರೇಪ್ ಮಾಡಿದ್ದರೆ, ಅವರ ಮೇಲೆ ಕೇಸ್ ಹಾಕಲಿ ಎಂದು ಲೇವಡಿ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳು…

ಪತ್ನಿಯನ್ನು ಕೊಂದು ಅಪಘಾತದ ಕಥೆ ಕಟ್ಟಿದ | ಕೊನೆಗೂ ಬಯಲಾಯ್ತು ಪತಿಯ ಹೇಯ ಕೃತ್ಯ

ನಿನ್ನ ಕಾಲ್ಗುಣ ಸರಿಯಿಲ್ಲ, ನೀನು ದರಿದ್ರ… ಪತಿಯ ನಿಂದನೆಯಿಂದ ಬೇಸತ್ತು ಪತ್ನಿ ಆತ್ಮಹತ್ಯೆ | ಡೆತ್ ನೋಟ್ ನಲ್ಲಿ ಭಾವನಾತ್ಮಕ ಸಂದೇಶ

ಸರ್ಕಾರ ಮಾರಾಟದಲ್ಲಿ ನಿರತವಾಗಿದೆ, ನಿಮ್ಮ ಆರೋಗ್ಯ ನೀವೇ ನೋಡಿಕೊಳ್ಳಿ | ರಾಹುಲ್ ಗಾಂಧಿ

ಅತ್ಯಾಚಾರ ನಡೆದದ್ದು ಅಲ್ಲಿ, ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ | ಗೃಹ ಸಚಿವ ಅರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

ಕಾರನ್ನು ನೀರಿಗೆ ಹಾರಿಸಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ | ಇಬ್ಬರು ನೀರುಪಾಲು

ಮೈಸೂರು: ಬೀದಿ ದೀಪಗಳಿಲ್ಲದ ಕತ್ತಲ ಪ್ರದೇಶ ಅತ್ಯಾಚಾರಿಗಳಿಗೆ ಅನುಕೂಲವಾಗುತ್ತಿದೆಯೇ? | ಸಾರ್ವಜನಿಕರು ಹೇಳುತ್ತಿರುವುದೇನು?

Disclaimer:

www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.

ಇತ್ತೀಚಿನ ಸುದ್ದಿ