ಬೆಳ್ತಂಗಡಿ: ಬಂದಾರು ಗ್ರಾಮದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ
ಬೆಳ್ತಂಗಡಿ: ತಾಲೂಕು ಬಂದಾರು ಗ್ರಾಮದ ಸಿದ್ದಾರ್ಥ ಕಾಲೋನಿ ಪುನರಡ್ಕದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು 1949 ನವೆಂಬರ್ 26 ರಂದು ಸಂವಿಧಾನ ಸಮರ್ಪಿಸಿದ ದಿನವನ್ನು ಬಹಳ ಅರ್ಧಪೂರ್ಣವಾಗಿ ಆಚರಿಸಲಾಯಿತು.
ಅಂಬೇಡ್ಕರವರ ಭಾವಚಿತ್ರಕ್ಕೆ ತನಿಯರು ಹಾಗೂ ಸನಿಕಾ ಸುಶ್ಮಿತಾ ಅಶ್ಮಿತಾ ಮಾಲಾರ್ಪನೆ ಮಾಡಿ ದೀಪ ಬೆಳಗಿಸಿದರು. ಈ ಸಭೆಯಲ್ಲಿ ಭಾಸ್ಕರ್ ಸಂವಿಧಾನ ಸಮರ್ಪನ ದಿನವನ್ನು ಉದ್ದೇಶಿಸಿ ಮಾತನಾಡಿದರು.
ಬಹುಜನ ಸಮಾಜ ಪಾರ್ಟಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಸಂಜೀವ ನೀರಾಡಿ, ಬಾಬು, ಬಹುಜನ ಸಮಾಜ ಪಾರ್ಟಿ ತಾಲೂಕು ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್, ಸಿದ್ದಾರ್ಥ ಕಾಲೋನಿ ಅಧ್ಯಕ್ಷ ಕೃಷ್ಣಪ್ಪ ಪಿ., ಕೊರೇಗಾಂವ್ ವಿಜಯೋತ್ಸವದ ಆಚರಣ ಸಮಿತಿಯ ಅಧ್ಯಕ್ಷ ಕೃಷ್ಣ ಬಂಡಾಸಾಲೆ, ಭೀಮ್ ರಾವ್ ಯುವ ವೇದಿಕೆ ಗೌರವ ಅಧ್ಯಕ್ಷ ರಮೇಶ್ ಉಮಿಯ, ಸಿದ್ದಾರ್ಥ ಮಹಿಳಾ ಘಟಕ ಅಧ್ಯಕ್ಷ ರು ಹಾಗೂ ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಉಪಸ್ಥಿತಿ ಇದ್ದರು. ರಮೇಶ್ ಬಿ.ಎಲ್.ನಿರೂಪಿಸಿ ವಂದಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka