ಕೊರಿಯರ್ ಮೂಲಕ ಬಂದಿದ್ದ ಹೇರ್ ಡ್ರೈಯರ್ ಸ್ಫೋಟ: ಯೋಧನ ಪತ್ನಿಯ ಹಸ್ತ ಛಿದ್ರ - Mahanayaka

ಕೊರಿಯರ್ ಮೂಲಕ ಬಂದಿದ್ದ ಹೇರ್ ಡ್ರೈಯರ್ ಸ್ಫೋಟ: ಯೋಧನ ಪತ್ನಿಯ ಹಸ್ತ ಛಿದ್ರ

Hair dryer
20/11/2024

ಬಾಗಲಕೋಟೆ: ಕೊರಿಯರ್ ಮೂಲಕ ಬಂದಿದ್ದ ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಮೃತ ಯೋಧರೊಬ್ಬರ ಪತ್ನಿಯ ಎರಡೂ ಹಸ್ತಗಳು ಛಿದ್ರ ಛಿದ್ರಗೊಂಡಿರುವ ಘಟನೆ ಬಾಗಲಕೋಟೆಯ ಇಳಕಲ್ ನಲ್ಲಿ ನಡೆದಿದೆ.

ಮೃತ ಯೋಧ ಪಾಪಣ್ಣ ಎಂಬವರ ಪತ್ನಿ ಬಸಮ್ಮ ಯರನಾಳ ಎಂಬವರು ಗಾಯಗೊಂಡವರಾಗಿದ್ದಾರೆ. ನೆರೆಯ ಮನೆಯ ಶಶಿಕಲಾ ಎಂಬವರ ಮನೆಗೆ ಹೇರ್ ಡ್ರೈಯರ್ ಕೊರಿಯರ್ ಮೂಲಕ ಬಂದಿತ್ತು. ಶಶಿಕಲಾ ಅವರು ಊರಿನಲ್ಲಿ ಇಲ್ಲದ ಕಾರಣ ತಮ್ಮ ಸ್ನೇಹಿತೆ ಬಸಮ್ಮಾ ಅವರಿಗೆ ಕರೆ ಮಾಡಿ, ಯಾವುದೋ ಪಾರ್ಸೆಲ್ ಬಂದಿದೆ ತೆಗೆದುಕೋ ಎಂದಿದ್ದಾರೆ.

ಬಸಮ್ಮಾ ಕೊರಿಯರ್ ಸಿಬ್ಬಂದಿ ಬಳಿ ಪಾರ್ಸೆಲ್ ಪಡೆದಾಗ ಹೇರ್ ಡ್ರೈಯರ್ ಅದರಲ್ಲಿತ್ತು. ಇದೇ ವೇಳೆ ಅಕ್ಕಪಕ್ಕದ ಮನೆಯವರು ಹೇರ್ ಡ್ರೈಯರ್ ಆನ್ ಮಾಡಿ ತೋರಿಸಿ ಎಂದು ಬಸಮ್ಮಾ ಅವರಿಗೆ ಹೇಳಿದ್ದಾರೆ. ಹೇರ್ ಡ್ರೈಯರ್ ಸ್ವಿಚ್ ಹಾಕಿದ ವೇಳೆ ಸ್ಫೋಟಗೊಂಡಿದೆ. ಪರಿಣಾಮ ಬಸಮ್ಮಾ ಅವರ ಹಸ್ತ ಛಿದ್ರಗೊಂಡಿದೆ.

ಶಶಿಕಲಾ ಅವರು ಹೇರ್ ಡ್ರೈಯರ್ ಆರ್ಡರ್ ಮಾಡಿರಲಿಲ್ಲ. ಆದರೂ ಅದು ಹೇಗೆ ಕೊರಿಯರ್ ಬಂತು ಎನ್ನುವ ಪ್ರಶ್ನೆ ಕೇಳಿ ಬಂದಿದೆ. ಈ ಹೇರ್ ಡ್ರೈಯರ್ ಆಂಧ್ರದ ವಿಶಾಖಪಟ್ಟಣದಲ್ಲಿ ತಯಾರಾಗಿದೆ ಎನ್ನುವ ಅಂಶ ತಿಳಿದು ಬಂದಿದೆ.
ಸದ್ಯ ಬಸಮ್ಮಾ ಅವರು ಇಳಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ