ಪುತ್ತೂರು ಜಾತ್ರೆ: ಸುಡುಮದ್ದು ಪ್ರದರ್ಶನ ವೇಳೆ ಬೆಂಕಿ ತಾಕಿ 7 ಮಂದಿಗೆ ಗಾಯ - Mahanayaka

ಪುತ್ತೂರು ಜಾತ್ರೆ: ಸುಡುಮದ್ದು ಪ್ರದರ್ಶನ ವೇಳೆ ಬೆಂಕಿ ತಾಕಿ 7 ಮಂದಿಗೆ ಗಾಯ

19/04/2026

ಸಾಂದರ್ಭಿಕ ಚಿತ್ರ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯಲ್ಲಿ  ಸುಡುಮದ್ದು ಪ್ರದರ್ಶನದ ವೇಳೆ ಬೆಂಕಿ ಕಿಡಿ ತಾಕಿ ಹಲವರು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಏ. 17ರಂದು ರಾತ್ರಿ ಸುಡುಮದ್ದು ಪ್ರದರ್ಶನ ನಡೆದಿದ್ದು, ಈ ವೇಳೆ ದೂರದಲ್ಲಿ ನಿಂತು ವೀಕ್ಷಿಸುತ್ತಿದ್ದ ಏಳು ಮಂದಿ ಬೆಂಕಿಯ ಕಿಡಿ ತಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂದಾಪುರ ಮೂಲದ ಸುಮಂತ್ ಶೆಟ್ಟಿ, ಭರತ್, ಕೌಶಿಕ್, ಸೌಮ್ಯಾ, ದೀಪಕ್, ಯಶವಂತ, ಮೋಹನ್ ಗಾಯಗೊಂಡವರು. ಅವರೆಲ್ಲರೂ ಸ್ನೇಹಿತರಾಗಿದ್ದು, ಜೊತೆ ಸೇರಿ ಜಾತ್ರೆಗೆ ಆಗಮಿಸಿದ್ದರು.

ಗಾಯಗೊಂಡವರು ಅಪಾಯದಿಂದ ಪಾರಾಗಿದ್ದಾರೆ. ಸುಡುಮದ್ದು ನಿರ್ವಹಣೆ ಮಾಡುವವರು, ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಹಾಗೂ ಇತರರು ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಮುಂಜಾಗ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳದೆ ನಿರ್ಲಕ್ಷಿಸಿದ್ದಾರೆ ಎಂದು ಸುಮಂತ್ ಶೆಟ್ಟಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ