ಕೊವಿಡ್ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ | ಡಾ.ರಾಜುಗೆ ನೋಟಿಸ್ - Mahanayaka

ಕೊವಿಡ್ ಬಗ್ಗೆ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡಿದ ಆರೋಪ | ಡಾ.ರಾಜುಗೆ ನೋಟಿಸ್

dr raju
19/05/2021

ಬೆಂಗಳೂರು: ಕೊವಿಡ್ ಸೋಂಕಿನ ಬಗ್ಗೆ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಿ ಮೂಡಲಪಾಳ್ಯದಲ್ಲಿರುವ ಸಾಗರ್ ಕ್ಲಿನಿಕ್ ನ ಮಾಲಿಕ ಡಾ.ರಾಜು ಅವರಿಗೆ ಜಿಲ್ಲಾ ಆರೋಗ್ಯ ಕಚೇರಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಕೊವಿಡ್ ಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ತಪ್ಪು ಮಾರ್ಗದರ್ಶನ ನೀಡುತ್ತಿದ್ದು, ತಮ್ಮ ಕ್ಲಿನಿಕ್ ನಲ್ಲಿನ ವೈದ್ಯರು ಮಾಸ್ಕ್ ಸ್ಯಾನಿಟೈಜರ್ ಬಳಸದೇ, ದೈಹಿಕ ಅಂತರ ಕಾಪಾಡದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಪತ್ರಕ್ಕೆ ತಾವು ಉತ್ತರವನ್ನು ನೀಡಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ನಿಮ್ಮ ಉತ್ತರ ದೊರಕದಿದ್ದರೆ, ಈ ಸಂಬಂಧಿತ ಕಾಯ್ದೆಗಳನ್ನು ದಾಖಲಿಸಿ, ತಮ್ಮ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಕೊವಿಡ್ ಗೆ ಸಂಬಂಧಿಸಿದಂತೆ ಡಾ.ರಾಜು ಅವರು ಮಾಧ್ಯವೊಂದಕ್ಕೆ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಆರೋಗ್ಯ ಕಚೇರಿ ಈ ಸ್ಪಷ್ಟನೆಯನ್ನು ಕೇಳಿದೆ. ಸಾರ್ವಜನಿಕರಿಗೆ ಮಾಹಿತಿ ನೀಡುತ್ತಾ, ಕೊವಿಡ್ ಮಾರ್ಗಸೂಚಿಗಳ ವಿರುದ್ಧವಾಗಿ ರಾಜು ಅವರು ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತೀಚಿನ ಸುದ್ದಿ