ಮುಂದಿನ ಚುನಾವಣೆಯಲ್ಲಿ ಉಚಿತ ಕೊರೊನಾ ಲಸಿಕೆಯೇ ರಾಜಕೀಯ ಪಕ್ಷಗಳ ಪ್ರಮುಖ ಬಂಡವಾಳ! - Mahanayaka

ಮುಂದಿನ ಚುನಾವಣೆಯಲ್ಲಿ ಉಚಿತ ಕೊರೊನಾ ಲಸಿಕೆಯೇ ರಾಜಕೀಯ ಪಕ್ಷಗಳ ಪ್ರಮುಖ ಬಂಡವಾಳ!

22/10/2020

ತಿರುಚ್ಚಿ: ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.

ಕೊರೋನಾ ಲಸಿಕೆ ಸಿಕ್ಕ ಬಳಿಕ, ತಮಿಳುನಾಡು ಸರ್ಕಾರವು ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡುತ್ತದೆ ಎಂದು ಹೇಳಿದರು. ಇತ್ತೀಚೆಗೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿಯೂ ಉಚಿತ ಕೊರೊನಾ ಲಸಿಕೆ ನೀಡುವ ಭರವಸೆ ನೀಡಲಾಗಿದೆ. ಇದೀಗ ಪಳನಿ ಸ್ವಾಮಿ ಕೂಡ ಇದೇ ಹಾದಿಯಲ್ಲಿ ಮುಂದುವರಿದಿದ್ದಾರೆ.

ಪುದುಕ್ಕೊಟ್ಟೈನಲ್ಲಿ ಇಂದು ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪಳನಿಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಸದ್ಯ ಮುಂದಿನ ಚುನಾವಣೆಯಲ್ಲಿ ಕೊರೊನಾ ಲಸಿಕೆ ಎನ್ನುವುದು ಎಲ್ಲ ಪಕ್ಷಗಳ ಬಂಡವಾಳವಾಗುವ ಸಾಧ್ಯತೆಗಳಿವೆ.

ಒಂದೆಡೆ ಇಡೀ ವಿಶ್ವದ ವಿಜ್ಞಾನಿಗಳು ಕೊರೊನಾ ಲಸಿಕೆ ಕಂಡು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಲಸಿಕೆಯೇ ಸಿದ್ಧಗೊಂಡಿಲ್ಲ. ಇನ್ನೂ ಸಿದ್ಧವಾಗದ ಲಸಿಕೆನ್ನು ಉಚಿತವಾಗಿ ನೀಡುತ್ತೇವೆ ಎಂದು ರಾಜಕೀಯ ಪಕ್ಷಗಳು ರಾಜಕೀಯ ಲಾಭ ಪಡೆಯಲು ಮುಂದಾಗಿವೆ.

ಇತ್ತೀಚಿನ ಸುದ್ದಿ