ದಾಸಪ್ಪ ಎಡಪದವು ಅವರ ಮೊದಲ ವರ್ಷದ ಪುಣ್ಯಸ್ಮರಣೆ
ಎಡಪದವು: ಮಹಾ ಬೌದ್ಧ ಉಪಾಸಕ, ಬಹುಜನ ಸಮಾಜ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧ್ಯಕ್ಷ ಧೀಮಾನ್ ದಾಸಪ್ಪ ಎಡಪದವು ಅವರ ಮೊದಲ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಭಾನುವಾರ ತಮ್ಮ ಸ್ವಗೃಹ ಗಯಾ ವಿಹಾರ್ ಎಡಪದವುನಲ್ಲಿ ನಡೆಯಿತು.
ಮೊದಲಿಗೆ ದಿವಂಗತ ಧಿಮಾನ್ ದಾಸಪ್ಪ ಅವರ ಸಮಾಧಿಗೆ ಮಾಲಾರ್ಪಣೆ ಮಾಡಿ ಬಳಿಕ ಬುದ್ಧ ವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಾಹಿತಿ, ಸಮಾಜ ಪರಿವರ್ತನಾ ಮುಖಂಡರಾದ ಅತ್ರಾಡಿ ಅಮೃತಾ ಶೆಟ್ಟಿ, ಸಮಾಜ ಪರಿವರ್ತನ ಮುಖಂಡರಾದ ಲಕ್ಷ್ಮೀ ಗೋಪಿನಾಥ್, ಬಿಎಸ್ಪಿ ಜಿಲ್ಲಾ ಸಂಯೋಜಕರಾದ ದೇವಪ್ಪ ಬೋದ್, ಬಿಎಸ್ಪಿ ದ.ಕ. ಜಿಲ್ಲಾ ಅಧ್ಯಕ್ಷ ಗೋಪಾಲ್ ಮುತ್ತೂರು, ಧಮ್ಮಾಚಾರಿ ಎಸ್. ಆರ್. ಲಕ್ಷ್ಮಣ್, ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಮುತ್ತೂರು, ಪೊಲೀಸ್ ಹೆಡ್ ಕಾನ್ಸ್ಟೇಬಲ್ ವೆಂಕಪ್ಪ, ಕರ್ನಾಟಕ ಭೀಮ್ ಆರ್ಮಿ ದ.ಕ. ಜಿಲ್ಲಾಧ್ಯಕ್ಷರು, ವಿವೇಕಾನಂದ ಶಿರ್ತಾಡಿ, ದಲಿತ ಮುಖಂಡರಾದ ಅಚ್ಚುತ ಸಂಪಿಗೆ, ಬಿ.ಕೆ. ವಸಂತ್, ವೆಂಕಣ್ಣ ಕೊಯ್ಯೂರು, ರಾಜೀವ್ ಕಕ್ಯಪದವು, ವಿಠಲ್ ಕುಂದರ್, ದಾಸಪ್ಪ ಅವರ ಪತ್ನಿ ಶಕುಂತಲಾ ಹಾಗೂ ಮಕ್ಕಳು ಮತ್ತಿತರರು ಉಪಸ್ಥಿತರಿದ್ದರು.