ಸಾಲ ಬಾಧೆ, ಬ್ಯಾಂಕ್ ಸಿಬ್ಬಂದಿಗಳ ಕಿರುಕುಳ: ರೈತ ಸಾವಿಗೆ ಶರಣು - Mahanayaka

ಸಾಲ ಬಾಧೆ, ಬ್ಯಾಂಕ್ ಸಿಬ್ಬಂದಿಗಳ ಕಿರುಕುಳ: ರೈತ ಸಾವಿಗೆ ಶರಣು

manjanaik
01/04/2025

ಚಿಕ್ಕಮಗಳೂರು:   ಸಾಲಭಾದೆ ತಾಳಲಾರದೆ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ನಡೆದಿದೆ.


Provided by

ಮಂಜಾನಾಯ್ಕ್ (45) ಮೃತ ರೈತನಾಗಿದ್ದು,  ಬ್ಯಾಂಕ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ರೈತ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಜಾನಾಯ್ಕ್ ಯೂನಿಯನ್ ಬ್ಯಾಂಕಿನಿಂದ 4 ಲಕ್ಷದ 70 ಸಾವಿರ ಸಾಲ ಪಡೆದಿದ್ದರು. ಸಾಲ ವಸೂಲಿ ನೆಪದಲ್ಲಿ  ಬ್ಯಾಂಕಿನ ವ್ಯವಸ್ಥಾಪಕ ಕಿರಣ್, ಗುಮಾಸ್ತ ಪಿರೋಜಿ ಆಗಾಗ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಸಾಲ ಕಟ್ಟುವಂತೆ ಬ್ಯಾಂಕ್ ನವರು ಲಾಯರ್ ನೋಟೀಸ್ ಕಳುಹಿಸುತ್ತಿದ್ದರು. ಹಣ ಕಟ್ಟುವಂತೆ ಸಾರ್ವಜನಿಕ ಪ್ರದೇಶದಲ್ಲಿ ಕೂಡ ಬ್ಯಾಂಕ್ ಸಿಬ್ಬಂದಿಗಳು ನಿಂದಿಸುತ್ತಿದ್ದರಂತೆ. ಇದರಿಂದ ನೊಂದು, ಮರ್ಯಾದೆಗೆ ಅಂಜಿ ಮಂಜಾನಾಯ್ಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಮಂಜಾನಾಯ್ಕ್ ಅವರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.  ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ