ಮಾನವನ ದಾಳಿಗೆ ಕಾಡಾನೆ ಬಲಿ! - Mahanayaka

ಮಾನವನ ದಾಳಿಗೆ ಕಾಡಾನೆ ಬಲಿ!

wild elephant
01/04/2025

ಚಿಕ್ಕಮಗಳೂರು:  ಒಂದೆಡೆ ಆನೆಗಳ ದಾಳಿಗೆ ಜನರು ಸಾವನ್ನಪ್ಪುತ್ತಿದ್ದಾರೆ. ಇದೀಗ ಜನರ ದಾಳಿಗೆ ಆನೆ ಸಾವನ್ನಪ್ಪಿದೆ. ಹೌದು… ಹಲಸಿನಕಾಯಿ‌ ತಿನ್ನಲು ಹೋಗಿ ಬೃಹತ್ ಕಾಡಾನೆ ಮಾನವ ನಿರ್ಮಿತ ವಿದ್ಯುತ್ ಶಾಕ್ ಗೆ ಬಲಿಯಾಗಿದೆ.


Provided by

ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಲಾಲ್ಬಾಗ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.  ಅಂದಾಜು 35 ವರ್ಷದ ಕಾಡಾನೆ ಸಾವನ್ನಪ್ಪಿದ್ದು, ತಣಿಗೇಬೈಲು ಅರಣ್ಯ ವ್ಯಾಪ್ತಿಯ ಲಾಲ್ ಬಾಗ್ ರಸ್ತೆಯಲ್ಲಿ ಕಾಡಾನೆ ಉಸಿರು ಚೆಲ್ಲಿದೆ.

ಕಾಡಾನೆ ದಾಳಿಗೆ ಆಗಾಗ ಮಾನವರು ಬಲಿಯಾಗುತ್ತಿದ್ದಾರೆ.  ಈ ವೇಳೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಕಾಡಾನೆಗಳು ಇದೀಗ ಬಂಡೆಗಳ ನಡುವೆ ಸಿಲುಕಿ, ಆಹಾರವಿಲ್ಲದೇ, ವಿದ್ಯುತ್ ಶಾಕ್ ಗಳಿಂದ ಸಾವನ್ನಪ್ಪುತ್ತಿವೆ.

ಆನೆಗಳು ಓಡಾಡುವ ಜಾಗಗಳಲ್ಲಿ ವಿದ್ಯುತ್ ತಂತಿ ನಿರ್ಮಾಣ ಮಾಡುತ್ತಿರುವುದರಿಂದ ಕಾಡಾನೆಗಳು ಸಾವನ್ನಪ್ಪಿರುವ ಪ್ರಕರಣಗಳು ಈ ಹಿಂದೆಯೂ ನಡೆದಿದ್ದರೂ, ಅರಣ್ಯ ಇಲಾಖೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಅನುಮಾನ ಸೃಷ್ಟಿಸಿದೆ.

ಸ್ಥಳಕ್ಕೆ ಅರಣ್ಯ ಅಧಿಕಾರಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಈ ಘಟನೆ ನಡೆದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ