ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯ ಅತ್ಯಾಚಾರ | ಸಂಜೆ ಹೊರಗೆ ಹೋಗಿರದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ ಎಂದ ಮಹಿಳಾ ಆಯೋಗದ ಸದಸ್ಯೆ - Mahanayaka

ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಯ ಅತ್ಯಾಚಾರ | ಸಂಜೆ ಹೊರಗೆ ಹೋಗಿರದಿದ್ದರೆ ಅತ್ಯಾಚಾರ ನಡೆಯುತ್ತಿರಲಿಲ್ಲ ಎಂದ ಮಹಿಳಾ ಆಯೋಗದ ಸದಸ್ಯೆ

08/01/2021

ಬದೌನ್:  ಉತ್ತರಪ್ರದೇಶದಲ್ಲಿ ಸ್ವಧರ್ಮೀಯರಿಂದಲೇ ಅತ್ಯಾಚಾರಕ್ಕೊಳಗಾದ ಮಹಿಳೆಯ ಅತ್ಯಾಚಾರವ ಖಂಡಿಸುವುದು ಬಿಟ್ಟು, ದಾರಿ ತಪ್ಪಿಸುವ ಹೇಳಿಕೆ ನೀಡಿದ ಮಹಿಳಾ ಆಯೋಗದ ಸದಸ್ಯೆಯ ಮೇಲೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


Provided by

ದೇವಸ್ಥಾನಕ್ಕೆ ತೆರಳಿದ್ದ ಐದು ಮಕ್ಕಳ ತಾಯಿ 50 ವರ್ಷದ ಮಹಿಳೆಯನ್ನು ಅಪಹರಿಸಿ, ಗುಪ್ತಾಂಗಕ್ಕೆ ರಾಡ್ ಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಸಂತ್ರಸ್ತೆಯ ಮನೆಗೆ ಸಾಂತ್ವನ ಹೇಳಲು ತೆರಳಿದ್ದ ಮಹಿಳಾ ಆಯೋಗದ ಸದಸ್ಯೆ ಚಂದ್ರಕುಮಾರಿ ದೇವಿ, ಮಹಿಳೆ ಸಂಜೆ ಮನೆಯಿಂದ ಹೊರಗೆ ಹೋಗದೇ ಇರುತ್ತಿದ್ದರೆ, ಅತ್ಯಾಚಾರ ನಡೆಯುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಸಮಯದ ಬಗ್ಗೆ ಸದಾ ಯೋಚನೆ ಮಾಡಬೇಕು. ಯಾರ ಒತ್ತಡ ಬಂದರೂ ತಡವಾದ ನಂತರ ಹೊರ ಹೋಗಬಾರದು, ಅತ್ಯಾಚಾರ ಸಂತ್ರಸ್ತೆ ಮನೆಯಿಂದ ಒಬ್ಬಂಟಿಯಾಗಿ ಸಂಜೆ ನಂತರ ಹೋಗದೇ ಇದ್ದಿದ್ದರೆ ಅಥವಾ ಕುಟುಂಬ ಸದಸ್ಯರ ಜೊತೆ ಹೋಗಿದ್ದಿದ್ದರೆ ಆಕೆಯನ್ನು ರಕ್ಷಿಸಬಹುದಾಗಿತ್ತು ಎಂದು ಅತ್ಯಾಚಾರಿಗಳ ಪರವಾಗಿ ಬ್ಯಾಟಿಂಗ್ ಮಾಡಿದಂತೆ ಅವರು ಮಾತನಾಡಿದ್ದಾರೆ.

ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ಮಹಿಳೆ ಪಬ್ ಗೋ, ಬಾರ್ ಗೋ ಹೋಗಿರುವುದಲ್ಲ. ದೇವಸ್ಥಾನಕ್ಕೆ ಅವರು ಹೋಗಿದ್ದು. ಅಲ್ಲಿ ಅತ್ಯಾಚಾರ ನಡೆಯುತ್ತದೆ ಎಂದು ಅವರು ನಂಬಿರಲಿಲ್ಲ. ಮಹಿಳಾ ಆಯೋಗದ ಸದಸ್ಯೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿ ಅತ್ಯಾಚಾರವನ್ನು ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ ಮತ್ತು ಬಲಪಂಥೀಯ ಚಿಂತನೆಗಳಿಂದ ಅವರು ಪ್ರಭಾವಿತರಾಗಿದ್ದಾರೆ , ಹೀಗಾಗಿ ಇಂತಹ ಹೇಳಿಕೆ ಅವರು ನೀಡುತ್ತಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ