ಡೊನಾಲ್ಟ್ ಟ್ರಂಪ್ ಫೇಸ್ ಬುಕ್ ಖಾತೆಗೆ ಅನಿರ್ದಿಷ್ಟಾವಧಿ ನಿಷೇಧ - Mahanayaka

ಡೊನಾಲ್ಟ್ ಟ್ರಂಪ್ ಫೇಸ್ ಬುಕ್ ಖಾತೆಗೆ ಅನಿರ್ದಿಷ್ಟಾವಧಿ ನಿಷೇಧ

08/01/2021

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಅಕೌಂಟ್ ನ್ನು ಅನಿರ್ದಿಷ್ಟಾವಧಿ ನಿಷೇಧಿಸಲಾಗಿದೆ ಎಂದು ಫೇಸ್ ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.

ನಮ್ಮ ಸೇವೆಯನ್ನು ಅಧ್ಯಕ್ಷರು ಈ ಸಮಯದಲ್ಲಿ  ಬಳಸಿಕೊಳ್ಳುವುದು ಅಪಾಯಕಾರಿ  ಎಂದು ನಾವು ನಂಬಿದ್ದೇವೆ. ಹೀಗಾಗಿ ಟ್ರಂಪ್ ಅವರ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಗಳ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿದ್ದೇವೆ.

ಟ್ವಿಟ್ಟರ್ ಬುಧವಾರ ಸಂಜೆ ಟ್ರಂಪ್ ಅವರ ಖಾತೆಯನ್ನು 12 ಗಂಟೆಗಳ ಕಾಲ ಅಮಾನತು ಮಾಡಿತ್ತು. ಆದರೆ ಗುರುವಾರ ಬೆಳಿಗ್ಗೆ ಅಮಾನತನ್ನು ಹಿಂಪಡೆದಿತ್ತು. ಟ್ರಂಪ್ ಟ್ವೀಟ್ ಮಾಡುವುದನ್ನು ವೀಡಿಯೋ ಶೇರ್ ಮಾಡುವುದನ್ನು ಮತ್ತೆ ಆರಂಭಿಸಿದರು.


Provided by

ಇತ್ತೀಚಿನ ಸುದ್ದಿ