ಪೊಲೀಸ್, ಅಧಿಕಾರಿಗಳ ಎದುರೇ ಕೊಲೆ | ಆರೋಪಿ ಬಿಜೆಪಿ ಕಾರ್ಯಕರ್ತನ ಬಂಧನ - Mahanayaka
3:57 AM Wednesday 29 - November 2023

ಪೊಲೀಸ್, ಅಧಿಕಾರಿಗಳ ಎದುರೇ ಕೊಲೆ | ಆರೋಪಿ ಬಿಜೆಪಿ ಕಾರ್ಯಕರ್ತನ ಬಂಧನ

18/10/2020

ಬಲ್ಲಿಯಾ: ಪೊಲೀಸರು ಮತ್ತು ಅಧಿಕಾರಿಗಳ ಎದುರೇ ಗುಂಡು ಹಾರಿಸಿ ಸುರೇಂದ್ರ ಎಂಬವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯುಕರ್ತ ಧೀರೇಂದ್ರ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶ ಬಲ್ಲಿಯಾದ ಶಾಸಕ ಸುರೇಂದ್ರ ಸಿಂಗ್ ಆಪ್ತ ಧೀರೇಂದ್ರ ಸಿಂಗ್ ಪಡಿತರ ಅಂಗಡಿಗಳನ್ನು ಅಧಿಕಾರಿಗಳ ಸುಪರ್ದಿಗೆ ವಹಿಸುವ ಕಾರ್ಯಕ್ರಮವೊಂದರಲ್ಲಿ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಸುರೇಂದ್ರ ಅವರನ್ನು ಗುಂಡುಹಾರಿಸಿ ಕೊಲೆ ಮಾಡಿದ್ದ. ಇದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.

ಈತನಿಗೆ ಸಹಕರಿಸಿರುವ ಆರೋಪ ಹೊತ್ತ ಸಂತೋಷ್ ಯಾದವ್ ಮತ್ತು ಮರಜೀತ್ ಯಾದವ್​ ಕೂಡ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ ಎಸ್ ಟಿಎಫ್  ಬಂಧಿಸಿದೆ.

ಇತ್ತೀಚಿನ ಸುದ್ದಿ