ಸಿ.ಟಿ.ರವಿ, ಶೆಟ್ಟರ್ ಸುಲ್ತಾನ್ ಸಮಯದಲ್ಲಿ ಮಧುರೆ ಹುಲಿಯಾಗಿದ್ರಾ..?: ಕೆ.ಅಶ್ರಫ್ ಕಿಡಿ - Mahanayaka

ಸಿ.ಟಿ.ರವಿ, ಶೆಟ್ಟರ್ ಸುಲ್ತಾನ್ ಸಮಯದಲ್ಲಿ ಮಧುರೆ ಹುಲಿಯಾಗಿದ್ರಾ..?: ಕೆ.ಅಶ್ರಫ್ ಕಿಡಿ

ashraf
08/12/2022

ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಮಾಜಿಕ ಮತ್ತು ರಾಜಕೀಯ ವರ್ಚಸ್ಸನ್ನು ಶತಾಯಗತಾಯ ಟೀಕಿಸಿ ಆ ಮೂಲಕವಾದರೂ ತನ್ನ ತನ್ನ ಹೆಸರು ಕುಖ್ಯಾತಿಯಲ್ಲಿ ಚಲಾವಣೆಯಲ್ಲಿ ಇರಬೇಕು ಎಂದು ಬಯಸುತ್ತಿರುವ ರಾಜಕೀಯದ ಅಂತ್ಯದ ಅಂಚಿನಲ್ಲಿರುವ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಯವರು, ಇತ್ತೀಚೆಗೆ ಸಿದ್ದರಾಮಯ್ಯನವರನ್ನು ಗುರಿಪಡಿಸಿ ಅವರಿಗೆ ‘ ಸಿದ್ದರಾಮುಲ್ಲಾ ಖಾನ್ ‘  ಎಂಬ ಹೆಸರು ಸರಿ ಹೊಂದುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಸಿದ್ಧರಾಮಯ್ಯನವರ ಜಾತ್ಯತೀತ ನಿಲುವುಗಳನ್ನು ಮುಸ್ಲಿಮ್ ಹೆಸರಿನೊಂದಿಗೆ ತಳುಕು ಹಾಕಿ ತಾನು ಓರ್ವ ಹಿಂದೂ ನಾಯಕ ಹಿಂದೂ ಹುಲಿ ಎಂದು ಪ್ರಚಾರದಲ್ಲಿ ಇರಲು ಹವಣಿಸುತ್ತಿರುವುದು, ಸಿ.ಟಿ.ರವಿಯ ರಾಜಕೀಯ ಅಂತ್ಯವನ್ನು ಸೂಚಿಸುತ್ತದೆ ಎಂದು ಮುಸ್ಲಿಂ ಒಕ್ಕೂಟದ ದಕ್ಷಿಣ ಕನ್ನಡ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಕಿಡಿಕಾರಿದ್ದಾರೆ.

ಪ್ರಕಟಣೆಯಲ್ಲಿ ಕಿಡಿಕಾರಿದ ಅವರು, ಈ ಹಿಂದೆಲ್ಲ ಸಿ.ಟಿ.ರವಿಯಾದಿಯಾಗಿ ಇತರ ಸಂಘ ಪರಿವಾರ ಕೇಶವ ಕೃಪಾ ಪ್ರೇರಿತ ನಾಯಕರು ಇಸ್ಲಾಮಿನ,ಮುಸ್ಲಿಮರ ಸಂಕೇತ,ಚಿಹ್ನೆ,ಭಾವನೆ, ಗ್ರಂಥಗಳನ್ನು ಪ್ರಸ್ತಾಪಿಸಿ, ಶೀಘ್ರ ಪ್ರಚಾರ ನಾಯಕರಾಗಿ ರಾಜಕೀಯ ಸ್ಥಾನ ಮಾನ ಲಾಭ ಗಳಿಸಿರುವ ಉದಾಹರಣೆಗಳು ಜನರ ದೃಷ್ಟಿಯ ಮುಂದೆಯೇ ಇರುವಾಗ,ಇತ್ತೀಚೆಗೆ ಪವಿತ್ರ ಕುರ್ ಆನ್ ಗ್ರಂಥವನ್ನೂ ಪ್ರಸ್ತಾಪಿಸಿ ದುರ್ವ್ಯಾಖ್ಯಾನ ಗೊಳಿಸುವ  ರೀತಿಯಲ್ಲಿ ಈ ಗ್ರಂಥದ ಕೆಲವು ಸೂಕ್ತಗಳನ್ನು ಕನ್ನಡ ಭಾಷೆಯಲ್ಲಿ ಓದಿ ಹೇಳಿ, ಸದರಿ ಗ್ರಂಥವು, ಜನರನ್ನು ಅಪರಾಧಕ್ಕೆ ಪ್ರೇರೇಪಿಸುತ್ತದೆ ಎಂಬ ಅರ್ಥ ಸೂಚಿಸುವ ರೀತಿಯಲ್ಲಿ ಮತ್ತು  ತಾನು ಓರ್ವ ಬಹು ದೊಡ್ಡ ‘ ಮುಲ್ಲಾ ‘ ರೀತಿಯಲ್ಲಿ ಮಾಧ್ಯಮದ ಮುಂದೆ ಓದಿ ಹೇಳಿದ್ದನ್ನು ಈ ರಾಜ್ಯದ ಜನರು ವೀಕ್ಷಿಸಿದ್ದಾರೆ ಮತ್ತು ಜನರು ಸಿ.ಟಿ.ರವಿ ಯಾವ ಮನ ಸ್ಥಿತಿಯ ವ್ಯಕ್ತಿ ಎಂದೂ ಕೂಡಾ ಅಂದೆ ಅರಿತಿದ್ದಾರೆ ಎಂದಿದ್ದಾರೆ.

ಪ್ರಸ್ತುತ ಅಂತಹ ಸರ್ವ ಪ್ರಯತ್ನಗಳು  ವಿಫಲವಾಗಿ ಸಿ.ಟಿ.ರವಿ ಯಂತವರಿಗೆ ಎಲ್ಲೂ ಕೂಡಾ ಇಸ್ಲಾಮಿಕ್ ಮತ್ತು ಮುಸ್ಲಿಮ್ ಸಂಕೇತಗಳು ಲಭ್ಯವಾಗದೇ , ಬರ ಸೃಷ್ಟಿ ಆದಾಗ, ಜಾತ್ಯಾತೀತ ನಾಯಕರ ಹೆಸರನ್ನೇ ಮುಸ್ಲಿಮೀಕರಣ ಗೊಳಿಸಿ ಪ್ರಚಾರದ ತುತ್ತ ತುದಿಗೆ ತಲುಪುವ ತೆವಳಿನ  ಪ್ರಯತ್ನವೇ ಇಂದಿನ ರಾದ್ದಾಂತ ಆಗಿದೆ. ಸಿ.ಟಿ.ರವಿಯವರು ಈ ಹಿಂದೆ  ತಾನು ಮಧುರೆಯ ನಶೆಯಲ್ಲಿ ವಾಹನ ಅಫಘಾತ ಮಾಡಿ ಓರ್ವನನ್ನು ಶಾಶ್ವತ ಊನ ಗೊಳಿಸಿದ ಚರಿತ್ರೆ ಜನರ ಮುಂದೆ ಇರುವ ಸ್ಥಿತಿ ನೋಡುವಾಗ ಖಾನ್ ಕರಣದ ಸಿ.ಟಿ.ರವಿ, ‘ ಯಡ್ಡಿ ಸುಲ್ತಾನ್, ಶೆಟ್ಟರ್ ಸುಲ್ತಾನ್ ‘ ಸಮಯದಲ್ಲಿ ಕೂಡಾ ಮಧುರೆ ನಶೆಯಲ್ಲಿಯೇ ತಾನು ರಾಜಕೀಯ ಆಡಳಿತ ಮಾಡುತ್ತಿದ್ದರೆ? ಎಂಬ ಸಂಶಯವಾಗುತ್ತಿದೆ ಎಂದಿದ್ದಾರೆ.

‘ ಯಡ್ಡಿ ಸುಲ್ತಾನ್, ಶೆಟ್ಟರ್ ಸುಲ್ತಾನ್ ‘ ಸಮಯದಲ್ಲಿ ಇಲ್ಲದ ಖಾನ್ ಕರಣ ಸಿ.ಟಿ.ರವಿಗೆ ಇಂದು ಬರಲು ಕಾರಣ  ಅವರ ಮಧುರೆ ಹುಲಿ ನಶೆಯೆ ಇರುವಂತಿದೆ. ಮುಲ್ಲಾ ಮೌಲ್ವಿ ಗಳ ಹೆಸರಿನ ಪದಬಳಕೆಯನ್ನು ರಾಜಕೀಯ ಪ್ರತಿಷ್ಠೆಗೆ ಬಳಕೆ ಮಾಡುವುದು ಯಾರಿಗೂ ಶೋಭೆ ತರುವಂತದಲ್ಲ, ಸಿ.ಟಿ.ರವಿಯಂತೆ ಇತರರು ಯಾವುದೇ ಧರ್ಮಗುರುಗಳ,ಸ್ವಾಮಿ,ಮಠಾಧೀಶ ರ ಉಪನಾಮಗಳನ್ನು ಇಂದು ಅದೇ ರೀತಿಯಲ್ಲಿ ಬಳಕೆ ಮಾಡಿದ್ದರೆ ಪರಿಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪುತ್ತದೆ ಎಂದು ಊಹಿಸುವುದು ಸೂಕ್ತ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ