ಸರ್ಕಾರದ ಬಳಿಯಲ್ಲಿ ಹಣವಿಲ್ಲ | ಡೀಸೆಲ್ ಹಾಕೋಕು ಕಷ್ಟವಾಗ್ತಿದೆ ಎಂದ ಡಿಸಿಎಂ - Mahanayaka
9:59 AM Thursday 7 - December 2023

ಸರ್ಕಾರದ ಬಳಿಯಲ್ಲಿ ಹಣವಿಲ್ಲ | ಡೀಸೆಲ್ ಹಾಕೋಕು ಕಷ್ಟವಾಗ್ತಿದೆ ಎಂದ ಡಿಸಿಎಂ

14/11/2020

ಬೆಳಗಾವಿ:  ಕೆಎಸ್ಸಾರ್ಟಿಸಿ ಹಾಗೂ ಬಿಎಂಟಿಸಿ ನೌಕರರು ಸಂಬಳ ಸಿಗದೇ ಪರದಾಡುತ್ತಿದ್ದು, ಈ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಲಕ್ಷ್ಮಣ್ ಸವದಿ ಸರ್ಕಾರದ ಬಳಿಯಲ್ಲಿ ದುಡ್ಡಿಲ್ಲ, ಟಿಕೆಟ್ ನಿಂದ ಬಂದಿರುವ ಹಣ ಡೀಸೆಲ್ ಹಾಕೋಕು ಸಾಕಾಗುತ್ತಿಲ್ಲ ಎಂದು ಹೇಳಿದ್ದಾರೆ.

 ಕಳೆದ 8 ತಿಂಗಳಿಂದ ಕೊರೊನಾ ಕಾರಣದಿಂದಾಗಿ ಸಾರಿಗೆ ಇಲಾಖೆ ಸಂಕಷ್ಟದಲ್ಲಿದೆ. ಆದರೂ ಎರಡು ತಿಂಗಳು ಸಾರಿಗೆ ಸಿಬ್ಬಂದಿಗೆ ಸರ್ಕಾರದಿಂದಲೇ ಸಂಬಳ ಪಾವತಿಸಿದ್ದೇವೆ. ಸಂಬಳ ನೀಡಲು ಸರ್ಕಾರದ ಬಳಿಯೂ ಹಣದ ತೊಂದರೆ ಇದೆ ಎಂದು ಅವರು ಹೇಳಿದರು.

 ಕೊರೊನಾ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಪ್ರತಿ ತಿಂಗಳು 328 ಕೋಟಿ ಸಂಬಳಕ್ಕೆ ಹಣ ಬೇಕು. ಟಿಕೆಟ್ ನಿಂದ ಬರುತ್ತಿರುವ ಹಣ ಡೀಸೆಲ್ ಖರ್ಚಿಗೆ ಸರಿಯಾಗುತ್ತೆ ಎಂದು ಅವರು ಹೇಳಿದ್ದಾರೆ.

ಇನ್ನೂ 3-4 ದಿನಗಳಲ್ಲಿ ಸ್ವಲ್ಪ ಪ್ರಮಾಣದ ವೇತನವನ್ನು ನೌಕರರಿಗೆ ಪಾವತಿ ಮಾಡುತ್ತೇವೆ. ಸಧ್ಯಕ್ಕೆ ಸರ್ಕಾರದ ಮೇಲೆಯೇ ಅವಲಂಬಿತರಾಗಿದ್ದೇವೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ