ಇವಿಎಂ ವಿವಾದದಲ್ಲಿರುವಾಗಲೇ ಚುನಾವಣಾ ಆಯೋಗಕ್ಕೆ ಡಿಜಿಟಲ್ ವೋಟರ್ ಐಡಿ ಪ್ರಸ್ತಾವಣೆ - Mahanayaka

ಇವಿಎಂ ವಿವಾದದಲ್ಲಿರುವಾಗಲೇ ಚುನಾವಣಾ ಆಯೋಗಕ್ಕೆ ಡಿಜಿಟಲ್ ವೋಟರ್ ಐಡಿ ಪ್ರಸ್ತಾವಣೆ

12/12/2020

ನವದೆಹಲಿ:  ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಚುನಾವಣಾ ಆಯೋಗವು ಒಂದೊಂದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇದೀಗ ಡಿಜಿಟಲ್ ವೋಟರ್ ಐಡಿ ತರಲು ಮುಂದಾಗಿದೆ ಎಂದು ಹೇಳಲಾಗಿದೆ.

ಇವಿಎಂ ಸದ್ಯ ವಿವಾದದಲ್ಲೇ ಇರುವ ನಡುವೆಯೇ ಡಿಜಿಟಲ್ ವೋಟರ್ ಐಡಿಯ ಪ್ರಸ್ತಾಪ ಬಂದಿದೆ. ಈ ಐಡಿ ಹೇಗೆ ಕಾರ್ಯಾಚರಿಸಲಿದೆ ಎನ್ನುವುದು ತಿಳಿದಿಲ್ಲ. ಆದರೆ ಸದ್ಯ ಡಿಜಿಟಲ್ ವೋಟರ್ ಐಡಿ ಪ್ರಸ್ತಾವನೆಗೆ ಅನುಮತಿ ನೀಡಲು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಹೇಳಿಕೆಯ ಪ್ರಕಾರ, ಡಿಜಿಟಲ್ ಮಾದರಿಯ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ ಎಂದು ತಿಳಿದು ಬಂದಿದೆ.

ಡಿಜಿಟಲ್ ವೋಟರ್ ಐಡಿಯನ್ನು ಇಮೇಲ್ ಮೂಲಕ ತರಿಸಿಕೊಳ್ಳಬಹುದು, ಮೊಬೈಲ್ ನಲ್ಲಿ ಕೂಡ ಇರಿಸಿಕೊಳ್ಳಬಹುದು. ಈ ಕಾರ್ಡ್ ತಕ್ಷಣವೇ ಸಿಗುತ್ತದೆ ಮೊದಲಾದ ಉತ್ತಮ ಅರ್ಹತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಭಾರತದ ಸದ್ಯ ಸ್ಥಿತಿ ಗಮನಿಸಿದರೆ, ಮೊಬೈಲ್ ನೆಟ್ ವರ್ಕ್ ಗಳು, ಇಂಟರ್ ನೆಟ್ ಗಳ ವೇಗ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ಸರ್ಕಾರಿ ಕಚೇರಿಗಳಲ್ಲಿ ಯಾವಾಗಲೂ ಸರ್ವರ್ ಡೌನ್ ಎಂಬ ಮಾತು ಸಾಮಾನ್ಯವಾಗಿದೆ. ಇದೆಲ್ಲವನ್ನು ಸರ್ಕಾರ ಮೊದಲು ಸರಿಪಡಿಸುವ ಬದಲು ಡಿಜಿಟಲ್ ಕಾರ್ಡ್ ಯೋಜನೆಗಳಿಗೆ ಮುಂದಾಗಿರುವುದು ಜನರನ್ನು ಆಕ್ರೋಶಕ್ಕೀಡು ಮಾಡಿದೆ.


Provided by

ಇನ್ನೂ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತಿರುವ ಸರ್ಕಾರ ಹಾಗೂ ಸರ್ಕಾರದ ಪ್ರತಿನಿಧಿಗಳು, ವಿಜ್ಞಾನ ಮತ್ತು ಆಧುನಿಕತೆಯ ವಿರುದ್ಧ ಹೇಳಿಕೆ ನೀಡುತ್ತಲೇ ಬರುತ್ತಿದ್ದಾರೆ. ಭಾರತವನ್ನು ಅನಕ್ಷರಸ್ತವಾಗಿಸಿ ಡಿಜಿಟಲ್ ಇಂಡಿಯಾ ಎಂದು ಎಲ್ಲವನ್ನೂ ಡಿಜಿಟಲ್ ಮಾಡಿ ಬಿಟ್ಟರೆ, ಹಳ್ಳಿಯಲ್ಲಿ ಬದುಕುತ್ತಿರುವವರು, ಶಿಕ್ಷಣದಿಂದ ವಂಚಿತರಾದವರ ಪರಿಸ್ಥಿತಿ ಏನು? ಅಂಬಾನಿ ಅದಾನಿಯ ತೋಳಿನ ಸೆರೆಯಲ್ಲಿರುವ ಕೇಂದ್ರ ಸರ್ಕಾರವು, ದೇಶದಲ್ಲಿ ಎಲ್ಲರೂ ಅವರಂತೆಯೇ ಇದ್ದಾರೆ ಎಂದು ತಪ್ಪು ತಿಳಿದುಕೊಂಡಿದೆ. ವಾಸ್ತವ ಭಾರತವನ್ನು ನೋಡಬೇಕಾದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಸಚಿವ ಸಂಪುಟ, ಭಾರತದ ಸ್ಲಮ್ ಗಳಿಗೆ ಭೇಟಿ ನೀಡಲಿ, ಆ ಬಳಿಕ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡಲಿ ಎಂಬ ಮಾತುಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ