ಮಹಿಳೆಯರೇ ಎಚ್ಚರ! | ನರ್ಸ್ ಗಳ ಹಾಸ್ಟೆಲ್ ನಲ್ಲಿ ನಡೆದ ಈ ಘಟನೆ ತಪ್ಪದೇ ಓದಿ
ಬೆಂಗಳೂರು: ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ಎಷ್ಟು ಜಾಗೃತೆ ವಹಿಸಿದರೂ ಕಡಿಮೆಯೇ. ಯಾಕೆಂದರೆ ಈ ಸಮಾಜದಲ್ಲಿ ಅಷ್ಟೊಂದು ವಿಕೃತರು ಇದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿರುವ ಘಟನೆಯೊಂದು ಇದೀಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹೆಣ್ಣೊಬ್ಬಳು ಇನ್ನೊಂದು ಹೆಣ್ಣಿಗೆ ಶತ್ರುವಾಗಿದ್ದು, ಈಕೆ ಮಾಡಿದ ಕೆಲಸಕ್ಕೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವೈಟ್ ಫೀಲ್ಡ್ ನ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶ್ವಿನಿ ಎಂಬ ನರ್ಸ್, ತನ್ನ ಹಾಸ್ಟೆಲ್ ನಲ್ಲಿದ್ದ ಇತರ ನರ್ಸ್ ಗಳು ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ರಹಸ್ಯವಾಗಿ ವಿಡಿಯೋ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಡಿಸೆಂಬರ್ 5ರಂದು ನರ್ಸ್ ವೊಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಅಶ್ವಿನಿ ಚಿತ್ರೀಕರಿಸಿದ್ದು, ಈ ವೇಳೆ ಆಕೆ ಸಿಕ್ಕಿಬಿದ್ದಿದ್ದಾಳೆ. ಈ ಸಂದರ್ಭ ಆ ನರ್ಸ್ ಹಾಸ್ಟೆಲ್ ಮೇಲ್ವಿಚಾರಕಿಗೆ ಈ ಮಾಹಿತಿ ನೀಡಿದ್ದಾರೆ. ಈ ಸಂದರ್ಭ ಅಶ್ವಿನಿಯ ಮೊಬೈಲ್ ತೆಗೆದು ಪರಿಶೀಲಿಸಿದಾಗ, ನೂರಾರು ವಿಡಿಯೋಗಳು ಆಕೆಯ ಮೊಬೈಲ್ ನಲ್ಲಿ ಪತ್ತೆಯಾಗಿದೆ.
ಈ ವಿಡಿಯೋ ಯಾಕೆ ಮಾಡುತ್ತಿದ್ದೆ? ಎಂದು ಹಾಸ್ಟೆಲ್ ಮೇಲ್ವಿಚಾರಕಿ ಎಷ್ಟು ವಿಚಾರಿಸಿದರೂ ಈ ಬಗ್ಗೆ ಅಶ್ವಿನಿ ತುಟಿ ತೆರೆಯಲೇ ಇಲ್ಲ. ಹೀಗಾಗಿ ಸಂತ್ರಸ್ತೆ ಹಾಗೂ ಹಾಸ್ಟೆಲ್ ಮೇಲ್ವಿಚಾರಕಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ, ನರ್ಸ್ ಗಳು ಸ್ನಾನ ಮಾಡುವ ವಿಡಿಯೋವನ್ನು ತನ್ನ ಪ್ರಿಯಕರನಿಗೆ ಕಳುಹಿಸುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ಇನ್ನೂ ಈ ಕೃತ್ಯದ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದರು.