ದೀಪಾವಳಿ ಹಬ್ಬದಂದು ಪತ್ನಿಯನ್ನು ಕೊಂದು ಬೆಂಕಿ ಹಚ್ಚಿದ ಪತಿ - Mahanayaka
3:09 AM Tuesday 15 - September 2026

ದೀಪಾವಳಿ ಹಬ್ಬದಂದು ಪತ್ನಿಯನ್ನು ಕೊಂದು ಬೆಂಕಿ ಹಚ್ಚಿದ ಪತಿ

15/11/2020

ಮೈಸೂರು: ದೀಪಾವಳಿ ಹಬ್ಬದಂದೇ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದ್ದು, ಕೃತ್ಯದ ಬಳಿಕ ಆರೋಪಿ ಪತಿ ತಲೆ ಮರೆಸಿಕೊಂಡಿದ್ದಾನೆ.

ಟಿ.ನರಸೀಪುರದ ದೊಡ್ಡಮುಲಗೂಡು ಗ್ರಾಮದ ರಮೇಶ್(30) ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಪತ್ನಿ ಶಾಂತಮ್ಮ(22) ಹತ್ಯೆಯಾದ ಮಹಿಳೆಯಾಗಿದ್ದಾಳೆ. ಗ್ರಾಮ ಪಂಚಾಯತ್ ಚುನಾವಣೆಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಆರೋಪಿಯು ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿರುವ ಬನ್ನೂರು ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler