DIY  Bird Feeder ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಶಂಸೆ | ಬಿಸಿಲ ಧಗೆಗೆ ಹಕ್ಕಿಗಳಿಗೆ ನೀರು, ಆಹಾರ ನೀಡೋಣ - Mahanayaka

DIY  Bird Feeder ಗೆ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಶಂಸೆ | ಬಿಸಿಲ ಧಗೆಗೆ ಹಕ್ಕಿಗಳಿಗೆ ನೀರು, ಆಹಾರ ನೀಡೋಣ

diy bird feeder
07/04/2021

ಮಂಗಳೂರು: ಬಿಸಿಲ ಬೇಗೆಯಲ್ಲಿ ಇಡೀ ಊರೇ ಧಗ ಧಗ ಎನ್ನುತಿದೆ. ನೀರು ಯಾ ತಂಪಾದ ಆಹಾರ ಸೇವಿಸಬಹುದಾದ ಮಾನವ ಕುಲಕ್ಕೇ ಹೀಗಾಗ ಬೇಕಾದರೆ ಪ್ರಾಣಿ-ಪಕ್ಷಿಗಳು ಏನೇನ್ನ ಬೇಡ?

ಹೌದು. ಪಕ್ಷಿಗಳಿಗೆ ನೀರು, ಆಹಾರ ಬೇಕು. ಅದಕ್ಕಾಗಿ DIY (Do-It-Yourself) ಮಾದರಿಯಲ್ಲಿ ರಚಿಸಲು ಪ್ರೇರಣೆ ನೀಡಿದ್ದು Global Academy ನ ನಿರ್ದೇಶಕ ಆಸ್ಪರ್ ರಝಕ್ ಮತ್ತು ಸಹ್ಯಾದ್ರಿ ಕಾಲೇಜಿನ ಡಾ. ಅನಂತ್ ಪ್ರಭು, ಜಿ ಅವರು. ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್. ಅವರು ಖುಷಿ ಪಟ್ಟಿದ್ದು, ಅವರಿಗೆ ನೀಡಲಾದ ಮೊದಲ Bird feeder ನೋಡಿದ ಮೇಲೆ.

“ಇದೊಂದು ಅದ್ಭುತ ಪ್ಲಾನ್” ಎಂದು ಹೇಳಿದ ಮಂಗಳೂರಿನ ಜನಸ್ನೇಹಿ ಕಮಿಷನರ್, ಇದು ಎಲ್ಲಾ ಕಡೆ ಪ್ರಚಾರವಾಗಿ ಪಕ್ಷಿಗಳಿಗೆ ಮಾನವರ ಪ್ರೀತಿ ದೊರಕಲಿ ಎಂದರು.

Bird Feeder ಒಂದು ಸರಳ ಉಪಕರಣ ಆಗಿದ್ದು ಯಾರೂ ಕೂಡಾ ತಮ್ಮ ಮನೆಯಲ್ಲಿ ಉಪಯೋಗ ಮಾಡಿ ಹಳೆಯದಾದ ಅಥವಾ ಉಪಯೋಗಕ್ಕೆ ಇಲ್ಲದ ವಸ್ತುಗಳಿಂದ ತಯಾರಿಸಲು ಸಾಧ್ಯ, ಎಂದು ಡಾ.ಅನಂತ್ ಪ್ರಭು.ಜಿ ಮಾಹಿತಿ ನೀಡಿದರು.

“ಬೇಸಿಗೆಯ ಬಿಸಿಯಲ್ಲಿ ಮನುಷ್ಯರೇ ಕಷ್ಟಪಡುತ್ತಿರುವಾಗ ಪಕ್ಷಿಗಳ ಪಾಡು ಹೇಳತೀರದು. ಹಾಗಾಗಿ ನಾವು ನಮಗೆ ಸಿಕ್ಕಿದ ಸ್ಥಳದಲ್ಲಿ ಪಕ್ಷಿಗಳಿಗೆ ನೀರು, ಆಹಾರ ನೀಡಿ ಮಾನವೀಯತೆ ಮೆರೆಯೋಣ, ಎಂದು ರಝಕ್ ಹೇಳಿದರು.

ಇದೇ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು, ಕೆಲವೊಂದು ಪಕ್ಷಿಗಳು ಆಹಾರ ಇಲ್ಲದೇ ಬಳಲುವುದು ಮತ್ತು ಗಾಯಗೊಂಡು ನರಳುವುದು ಕೂಡಾ ಕಾಣಿಸುತ್ತದೆ. ಇದನ್ನು ಕಂಡವರು ಸೂಕ್ತ ಪರಿಹಾರಕ್ಕೆ ಶ್ರಮ ಪಡೋಣ” ಎಂದು ಹೇಳಿದರು.

ಇತ್ತೀಚಿನ ಸುದ್ದಿ