ಕಾರ್ತಿ ವೀರ್ಯಾರ್ಜುನಗೆ ಡಿ.ಕೆ.ಶಿವಕುಮಾರ್ ಪೂಜೆ: ಇದರ ವಿಶೇಷತೆ ಏನು?
11/01/2025
ಚಿಕ್ಕಮಗಳೂರು: ಶೃಂಗೇರಿ ಶಾರದಾಂಭೆ ದೇಗುಲದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾರ್ತಿ ವೀರ್ಯಾರ್ಜುನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇದೇ ಮೊದಲ ಬಾರಿಗೆ ಡಿಕೆಶಿ ಕಾರ್ತಿ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಸಿದ್ದಾರೆ. ದೇಗುಲದ ಗೋಡೆ ಮೇಲೆ ಇರುವ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಧಿಕಾರ ಹಾಗೂ ಶತ್ರು ಸಂಹಾರಕ್ಕಾಗಿ ಕಾರ್ತಿ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಸಲಾಗುತ್ತದೆ.
ಕಳೆದು ಹೋದ ವಸ್ತುವಿಗಾಗಿಯೂ ಇಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಶೃಂಗೇರಿ ಮಠದ ಆವರಣದ ನವಗ್ರಹ ಆಕಾರದ ದೇವಾಲಯದ ಗೋಡೆ ಮೇಲೆ ಇರುವ ಕಾರ್ತಿ ವೀರ್ಯಾರ್ಜುನಗೆ ಪೂಜೆ ಸಲ್ಲಿಸಲಾಗುತ್ತದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: