ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭ
ಅನಿವಾಸಿ ಭಾರತೀಯರು ತಮ್ಮ ಪೋಷಕರ ಯಾವುದೇ ಸಂಕೀರ್ಣ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವ ಮೂಲಕ, ತಕ್ಷಣದ ಎಚ್ಚರಿಕೆಗಳನ್ನು ಹೊಂದುವ ಮೂಲಕ ದೂರದಿಂದಲೇ ನಿಗಾವಹಿಸಿ ಆರೋಗ್ಯ ನೋಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯ
ಬೆಂಗಳೂರು: ಭಾರತದ ಆರೋಗ್ಯ ಕ್ಷೇತ್ರದ ಎಐ ನಾಯಕರಾಗಿರುವ ಡೋಝೀ ಸಂಸ್ಥೆಯು ಅನಿವಾಸಿ ಭಾರತೀಯರನ್ನು ಗಮನದಲ್ಲಿ ಇಟ್ಟುಕೊಂಡು ಕ್ಲಿನಿಕಲ್ ಗ್ರೇಡ್ ನ ಎಐ ಆಧರಿತ ರಿಮೋಟ್ ಪೇರೆಂಟ್ ಮಾನಿಟರಿಂಗ್ (ಆರ್ ಪಿ ಎಂ) ಸೇವೆಯಾದ ಡೋಝೀ ಶ್ರವಣ್ ಅನ್ನು ಆರಂಭಿಸಿದೆ. ಇದು ವಿದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯದ ಮೇಲೆ ನಿಗಾ ಇಡುವ ಆಧುನಿಕ ವ್ಯವಸ್ಥೆಯಾಗಿದೆ. ಡೋಝೀ ಶ್ರವಣ್ ಈಗ ವಿದೇಶದಲ್ಲಿರುವ ಕುಟುಂಬಗಳಿಗೆ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯವನ್ನು ರೆಗ್ಯುಲರ್ ಆಗಿ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ.
ಡೋಝೀಯ ಎಐ ಚಾಲಿತ, ಸಂಪರ್ಕರಹಿತ ರಿಮೋಟ್ ಹೆಲ್ತ್ ಮಾನಿಟರಿಂಗ್ ತಂತ್ರಜ್ಞಾನವನ್ನು ವೃದ್ಧರು ಸುಲಭವಾಗಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಅವರ ಆರೋಗ್ಯ ಕುರಿತ ಮಾಹಿತಿಯು ಸುರಕ್ಷಿತವಾಗಿ ಕುಟುಂಬಗಳು ಮತ್ತು ಆರೋಗ್ಯ ಸೇವೆ ಪೂರೈಕೆದಾರರು ಇಬ್ಬರನ್ನೂ ತಲುಪುತ್ತದೆ. ಡೋಝೀಯ ನಿರಂತರ ನಿಗಾವಹಿಸುವಿಕೆ ಮತ್ತು ನೈಜ ಸಮಯದಲ್ಲಿ ನೀಡುವ ಎಚ್ಚರಿಕೆಗಳು ದೇಹದ ಪ್ರಮುಖ ಅಂಶಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವಂತೆ ಮಾಡುತ್ತದೆ. ಭಾರತದ ನಂ. 1 ರಿಮೋಟ್ ಪೇಷಂಟ್ ಮಾನಿಟರಿಂಗ್ ಕಂಪನಿಯಾಗಿರುವ ಡೋಝೀ ದೇಶಾದ್ಯಂತ 280ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳ ವಿಶ್ವಾಸಾರ್ಹ ಪಾಲುದಾರನಾಗಿದೆ.
ಲಕ್ಷಾಂತರ ಸಂಖ್ಯೆಯಲ್ಲಿರುವ ಅನಿವಾಸಿ ಭಾರತೀಯರಿಗೆ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯ ನೋಡಿಕೊಳ್ಳುವುದು ಬಹಳ ದೊಡ್ಡ ಸವಾಲಾಗಿದೆ. ಆಗಾಗ ಬಂಧಗಳು ಮತ್ತು ನೆರೆಹೊರೆಯವರ ಸಹಾಯದಿಂದ ಚೆಕ್ ಅಪ್ ಗಳು ಮಾಡಿಸಬಹಾದರೂ ಮತ್ತು ಸೀಮಿತ ಟೆಲಿ ಮೆಡಿಸಿನ್ ಅವಕಾಶ ಇದ್ದರೂ ತುರ್ತು ಪರಿಸ್ಥಿತಿಗಳಲ್ಲಿ ಈ ವ್ಯವಸ್ಥೆಗಳು ಒದಗಿ ಬರುವುದು ಬಹಳ ಕಡಿಮೆ. ಆರಂಭಿಕ ಹಂತದಲ್ಲಿಯೇ ಸಂಕೀರ್ಣ ಆರೋಗ್ಯ ಸಮಸ್ಯೆ ಪತ್ತೆ ಹಚ್ಚದಿದ್ದರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಆರಂಭದಲ್ಲಿ ಸುಲಭವಾಗಿ ನಿರ್ವಹಿಸಬಹುದಾದ ಸಮಸ್ಯೆಗಳು ತಡವಾದಾಗ ಕೈಮೀರಿ ಸಾಧ್ಯತೆಯೇ ಹೆಚ್ಚು.
ಪ್ರಸ್ತುತ ಲಭ್ಯವಿರುವ ಪರಿಹಾರಗಳು ಅಷ್ಟೊಂದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬಹುತೇಕ ಹಿರಿಯ ವ್ಯಕ್ತಿಗಳು ಈಗ ಇರುವ ವ್ಯವಸ್ಥೆಗಳಲ್ಲಿ ಅಸಮಾಧಾನ ಹೊಂದಿಪರುತ್ತಾರೆ ಅಥವಾ ಅವುಗಳನ್ನು ಬಳಸಲು, ಚಾರ್ಜ್ ಮಾಡಲು ಅಥವಾ ನಿರ್ವಹಿಸಲು ಮರೆಯುತ್ತಾರೆ. ನಿರಂತರವಾಗಿ ನೈಜ ಸಮಯದ ಡೇಟಾ ಮಾನಿಟರಿಂಗ್ ಮಾಡುವಿಕೆ ಮತ್ತು ಸಮಸ್ಯೆ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆಯು ಸದ್ಯದ ತುರ್ತಾಗಿತ್ತು. ಇವೆಲ್ಲವೂ ದೂರದಲ್ಲಿದ್ದುಕೊಂಡೇ ದತ್ತಾಂಶ ಸುರಕ್ಷತೆ ಮತ್ತು ಗೌಪ್ಯತೆಯ ಅಂತರರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿ ತಮ್ಮ ಪ್ರೀತಿಪಾತ್ರರನ್ನು ನೋಡಿಕೊಳ್ಳಲು ಕುಟುಂಬಸ್ಥರಿಗೆ ನೆರವಾಗುವ ಸಮಗ್ರವಾದ, ಪ್ರಾಯೋಗಿಕವಾಗಿ ಸಾಬೀತಾಗಿರುವ, ನೈಜ ಸಮಯದ, ನಿಖರವಾದ, ವಿಶ್ವಾಸಾರ್ಹ ಮತ್ತು ಬಳಕೆದಾರ ಸ್ನೇಹಿ ನಿಗಾವಹಿಸುವಿಕೆ ಸೌಲಭ್ಯವನ್ನು ಒದಗಿಸುವ ತುರ್ತು ಅಗತ್ಯವನ್ನು ಸಾರುತ್ತದೆ.
ಡೋಝೀ ಶ್ರವಣ್ ಹಿರಿಯ ವ್ಯಕ್ತಿಗಳ ಹೃದಯ ಬಡಿತ, ಉಸಿರಾಟ, ರಕ್ತದೊತ್ತಡ ಮತ್ತು ನಿದ್ರೆಯ ಮಾದರಿಗಳಂತಹ ಪ್ರಮುಖ ಅಂಶಗಳನ್ನು ನಿರಂತರವಾಗಿ, ಸಂಪರ್ಕ ರಹಿತವಾಗಿ ನಿಗಾವಹಿಸಲು ಅನುವು ಮಾಡಿಕೊಡುವ ಮೂಲಕ ಮಹತ್ತರ ಕೆಲಸ ಮಾಡುತ್ತಿದೆ. ಎಐ- ಚಾಲಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿಯಲ್ಲಿ ನಿರ್ಮಿಸಲಾದ ಈ ವ್ಯವಸ್ಥೆಯು ಬಯೋಮಾರ್ಕರ್‌ಗಳನ್ನು ವಿಶ್ಲೇಷಿಸಲು ಮತ್ತು ಯಾವುದೇ ವ್ಯತ್ಯಾಸ ಉಂಟಾದಾಗ ಸಮಯಕ್ಕೆ ಸರಿಯಾಗಿ ಎಚ್ಚರಿಕೆಗಳನ್ನು ಒದಗಿಸಲು ಅತ್ಯಾಧುನಿಕ ಎಐ ಅಲ್ಗಾರಿದಮ್‌ಗಳನ್ನು ಬಳಸುತ್ತದೆ. ಆ ಮೂಲಕ ಆರೋಗ್ಯ ತುರ್ತುಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಲಭ್ಯವಾಗುವಂತೆ ಮಾಡುತ್ತದೆ. ತಂತ್ರಜ್ಞಾನವು ಯುಎಸ್ ಎಫ್ ಡಿ ಎ ಮಾನ್ಯತೆ ಪಡೆದಿದೆ ಮತ್ತು ಡೇಟಾ ಪ್ರೈವೆಸಿ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬದ್ಧವಾಗಿದೆ.
ಬಳಕೆದಾರ ಸ್ನೇಹಿ ಮೊಬೈಲ್ ಆಪ್ ಮೂಲಕ ಹಿರಿಯರ ಆರೋಗ್ಯ ಮಾಹಿತಿಯನ್ನು ತಿಳಿಯಬಹುದಾಗಿದ್ದು, ಅನಿವಾಸಿ ಭಾರತೀಯರೇ ಎಷ್ಟೇ ದೂರದಲ್ಲಿದ್ದರೂ ತಮ್ಮ ಪೋಷಕರ ಆರೋಗ್ಯ ಮಾಹಿತಿಯನ್ನು 24/7 ತಿಳಿದುಕೊಳ್ಳಬಹುದು.
ಈಗಾಗಲೇ ಭಾರತ, ಯುಎಸ್ಎ ಮತ್ತು ಆಫ್ರಿಕಾದಾದ್ಯಂತ 280ಕ್ಕೂ ಹೆಚ್ಚು ಆಸ್ಪತ್ರೆಗಳ ವಿಶ್ವಾಸಾರ್ಹ ಪಾಲುದಾರನಾಗಿರುವ ಡೋಝೀ ಸಂಸ್ಥೆಯು ಜಾಗತಿಕವಾಗಿ ಪರಿಣಾಮ ಬೀರುವ ‘ಮೇಡ್ ಇನ್ ಇಂಡಿಯಾ’ ಹೆಲ್ತ್ ಎಐ ಸಂಸ್ಥೆಯಾಗಿ, ಆ ಕ್ಷೇತ್ರದಲ್ಲಿ ದಾರಿದೀಪವಾಗಿ ರೂಪುಗೊಂಡಿದೆ. ಶ್ರವಣ್ ಮೂಲಕ ಹೊಸ ಅಧ್ಯಾಯವನ್ನು ಆರಂಭಿಸುತ್ತಿರುವ ಡೋಝೀ ಸಂಸ್ಥೆಯು ಅನಿವಾಸಿ ಭಾರತೀಯರು ಭಾರತದಲ್ಲಿನ ತಮ್ಮ ವಯಸ್ಸಾದ ಪೋಷಕರ ಆರೋಗ್ಯವನ್ನು ನೋಡಿಕೊಳ್ಳಲು ನೆರವಾಗಲು ಕ್ಲಿನಿಕಲ್ ಗ್ರೇಡ್ ಪರಿಹಾರ ಒದಗಿಸುತ್ತಿದೆ.
ಶ್ರವಣ್ ನ ಪ್ರಮುಖ ವಿಶೇಷತೆಗಳು:
* ಸಂಪರ್ಕ ರಹಿತವಾಗಿ, ನಿರಂತರವಾಗಿ ನಿಗಾವಹಿಸುವಿಕೆ:
○ ಹೃದಯದ ಬಡಿತ, ಉಸಿರಾಟದ ದರ, ರಕ್ತದೊತ್ತಡ ಮತ್ತು ನಿದ್ರಾ ಮಾದರಿಗಳಂತಹ ಪ್ರಮುಖ ಅಂಶಗಳನ್ನು ಯಾವುದೇ ಧರಿಸಬಲ್ಲ ಸಾಧನಗಳನ್ನು ಧರಿಸದೆಯೇ ತಿಳಿದುಕೊಳ್ಳಬಹುದಾದ ಎಐ ಆಧರಿತ ನಿಗಾವಹಿಸುವಿಕೆ ವ್ಯವಸ್ಥೆ ಇದಾಗಿದ್ದು, ವಯಸ್ಸಾದ ಪೋಷಕರು ಯಾವುದೇ ಕಿರಿಕಿರಿ ಅನುಭವಿಸುವ ಅವಶ್ಯಕತೆಯೇ ಇಲ್ಲವಾಗಿದೆ.
* ತಕ್ಷಣ ಅಲರ್ಟ್ ಗಳು ಮತ್ತು ನೋಟಿಫಿಕೇಷನ್ ಗಳು ಲಭ್ಯ:
○ ಆರೋಗ್ಯಕ್ಕೆ ಸಂಬಂಧಿಸಿದ ಅಂಶಗಳಲ್ಲು ಏರುಪೇರು ಉಂಟಾದಾಗ ತಕ್ಷಣವೇ ಅನಿವಾಸಿ ಭಾರತೀಯರಿಗೆ ಮತ್ತು ಭಾರತದಲ್ಲಿರುವ ಆರೋಗ್ಯ ಸೇವೆ ಪೂರೈಕೆದಾರರಿಗೆ ನೋಟಿಫಿಕೇಷನ್ ತಲುಪುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುವಂತೆ ಮಾಡಲಾಗುತ್ತದೆ.
* ಆರೋಗ್ಯ ಸೇವೆ ಪೂರೈಕೆದಾರರೊಂದಿಗೆ ಅತ್ಯುತ್ತಮ ಸಹಭಾಗಿತ್ವ:
○ ಭಾರತದಲ್ಲಿನ ಉನ್ನತ ಆಸ್ಪತ್ರೆಗಳ ಸಹಯೋಗ ಇರುವುದರಿಂದ ಅಲ್ಲಿ ನಿಯಮಿತ ಕನ್ಸಲ್ಟೇಷನ್ ಗಳಿಂದ ಹಿಡಿದು ತುರ್ತು ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಸೇವೆ ಪಡೆಯುವವರೆಗೆ ಉನ್ನತ ದರ್ಜೆಯ ಆರೋಗ್ಯ ಸೇವೆಗಳನ್ನು ಪೋಷಕರು ಪಡೆಯಬಹುದಾಗಿದೆ.
* ಪೂರ್ವಭಾವಿ ಆರೋಗ್ಯ ಸ್ಥಿತಿ ನಿರ್ವಹಣೆ:
○ ಅನಿವಾಸಿ ಭಾರತೀಯರು ಮಾಸಿಕ ವರದಿಗಳು ಮತ್ತು ಟ್ರೆಂಡ್ ಅನಾಲಿಸಿಸ್ ಪಡೆಯುತ್ತಾರೆ. ಆ ಮೂಲಕ ಅವರು ತಮ್ಮ ಪೋಷಕರ ಆರೋಗ್ಯ ಸ್ಥಿತಿಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಬಹುದು ಹಾಗೂ ಆರೋಗ್ಯ ನಿರ್ವಹಣೆಗೆ ಬೇಕಾದ ವಿವೇಕಯುಕ್ತ ನಿರ್ಧಾರಗಳನ್ನು ತೆಗೆದಕೊಳ್ಳಬಹುದು.
* ಸುಲಭ ಬಳಕೆ:
○ ಅದರ ಸರಳ ಮತ್ತು ಬಳಕೆದಾರ ಸ್ನೇಹಿ ಗುಣದಿಂದಾಗಿ ಹಿರಿಯ ವಯಸ್ಸಿನ ಬಳಕೆದಾರರು ತಮ್ಮ ದೈನಂದಿನ ಜೀವನದಲ್ಲಿ ಯಾವುದೇ ಕಿರಿಕಿರಿ ಅನುಭವಿಸದೆ ಸುಲಭವಾಗಿ ಅಳವಡಿಸಿಕೊಳ್ಳಲು ಶ್ರವಣ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಈ ಕುರಿತು ಮಾತನಾಡುವ ಡೋಝೀಯ ಸಿಇಓ ಮತ್ತು ಸಹ ಸಂಸ್ಥಾಪಕ ಮುದಿತ್ ದಂಡವತೆ ಅವರು, “ಭಾರತೀಯ ಸಂಸ್ಕೃತಿಯಲ್ಲಿ ಅಡಕಗೊಂಡಿರುವ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಸಾರವನ್ನು ಶ್ರವಣ್ ಪ್ರತಿನಿಧಿಸುತ್ತದೆ. ನಮ್ಮ ಹೆತ್ತವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂಬುದನ್ನು ಸಮಾಜ ತಿಳಿಸಿಕೊಟ್ಟಿದೆ. ಅನಿವಾಸಿ ಭಾರತೀಯರು ಜಾಗತಿಕ ಮಟ್ಟದಲ್ಲಿ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡುತ್ತಿದ್ದರೂ, ಅವರಿಗೆ ಅವರ ಪೋಷಕರ ಆರೋಗ್ಯವನ್ನು ದೂರದಿಂದಲೇ ನೋಡಿಕೊಳ್ಳುವುದು ನಿಜಕ್ಕೂ ದೊಡ್ಡ ಸವಾಲಾಗಿದೆ. ಅನಿವಾಸಿ ಭಾರತೀಯರು ಈಗ ಡೋಝೀ ಶ್ರವಣ್ ಮೂಲಕ ಭಾರತದಲ್ಲಿರುವ ತಮ್ಮ ಪೋಷಕರ ಆರೋಗ್ಯದ ಮೇಲೆ ಸುಲಭವಾಗಿ ನಿಗಾ ಇಡಬಹುದು ಮತ್ತು ಅವರ ಆರೋಗ್ಯ ನೋಡಿಕೊಳ್ಳಬಹುದು ಎಂದು ತಿಳಿದು ನೆಮ್ಮದಿ ಮತ್ತು ಶಾಂತಿ ಹೊಂದಬಹುದಾಗಿದೆ” ಎಂದು ಹೇಳಿದರು.
ಭಾರತದ ನಂ. 1 ರಿಮೋಟ್ ಪೇಷಂಟ್ ಮಾನಿಟರಿಂಗ್ ಮತ್ತು ಆರಂಭಿಕ ಹಂತದಲ್ಲಿಯೇ ಆರೋಗ್ಯ ಸಮಸ್ಯೆ ಎಚ್ಚರಿಕೆ ನೀಡುವ ವ್ಯವಸ್ಥೆ ಒದಗಿಸುವ ಕಂಪನಿಯಾಗಿ ಗುರುತಿಸಿಕೊಂಡಿರುವ ಡೋಝೀ ಸಂಸ್ಥೆಯ ಹೊಸ ತಂತ್ರಜ್ಞಾನವು ಆಸ್ಪತ್ರೆಗಳಲ್ಲಿ ತನ್ನ ಪ್ರಾಮುಖ್ಯತೆಯನ್ನು ಈಗಾಗಲೇ ಸಾಬೀತು ಪಡಿಸಿದೆ. ಆಸ್ಪತ್ರೆಗಳು ಕೋಡ್ ಬ್ಲೂ ಸಂದರ್ಭಗಳನ್ನು ಎದುರಿಸುವ ಅವಶ್ಯಕತೆಯೇ ಇಲ್ಲದಂತೆ ಮಾಡಿರುವುದರಿಂದ ಹಿಡಿದು ಶೇ.50ರಷ್ಟು ಐಸಿಯು ಹೋಗುವ ಪರಿಸ್ಥಿತಿಗಳನ್ನು ಕಡಿಮೆ ಮಾಡುವವರೆಗೆ ಡೋಝೀಯು ಮಹತ್ತರ ಸಾಧನೆ ಮಾಡಿದೆ. ರೋಗಿಗಳ ಸುರಕ್ಷತೆ ಮತ್ತು ಅತ್ಯಾಧುನಿಕ ಚಿಕಿತ್ಸಾ ಫಲಿತಾಂಶಗಳನ್ನು ಒದಗಿಸಲು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಒದಗಿಸಲು ಎಚ್ಚರಿಕೆ ನೀಡುವ ಅದರ ಆರಂಭಿಕ ಹಂತದ ಎಚ್ಚರಿಕೆ ವ್ಯವಸ್ಥೆಯ ಮೂಲಕ ಡೋಝೀಯು ಆರೋಗ್ಯ ಸೇವಾ ಪೂರೈಕೆದಾರರ ಆರೋಗ್ಯ ಸೇವೆ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: