ಡಾ.ಅಂಬೇಡ್ಕರರು ಪ್ರಧಾನಿಯಾಗುತ್ತಿದ್ದರೆ ಭಾರತ ನಂ.1 ಸ್ಥಾನದಲ್ಲಿರುತ್ತಿತ್ತು: ಹಾಸನ ನಗರ ಸಭಾ ಸದಸ್ಯ ಶಶಿ - Mahanayaka

ಡಾ.ಅಂಬೇಡ್ಕರರು ಪ್ರಧಾನಿಯಾಗುತ್ತಿದ್ದರೆ ಭಾರತ ನಂ.1 ಸ್ಥಾನದಲ್ಲಿರುತ್ತಿತ್ತು: ಹಾಸನ ನಗರ ಸಭಾ ಸದಸ್ಯ ಶಶಿ

shashi
06/12/2022

ಹಾಸನ: ಡಿಸೆಂಬರ್ 6 ಭಾರತೀಯರ ಪಾಲಿಗೆ ಅತ್ಯಂತ ನೋವಿನ ದಿನವಾಗಿದೆ. ಎಲ್ಲರಿಗೂ ಬದುಕುವ ಸಮಾನವಾದ ಹಕ್ಕನ್ನು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮೆಲ್ಲರನ್ನು ಅಗಲಿದ ದುಃಖದ ದಿನ ಎಂದು ಹಾಸನ ನಗರ ಸಭಾ ಸದಸ್ಯರಾದ ಶಶಿ ಅವರು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಇನ್ನಷ್ಟು ಕಾಲ ಬದುಕಿರಬೇಕಿತ್ತು. ಅವರನ್ನು ಬಹುಬೇಗನೇ ಕಳೆದುಕೊಂಡ ಈ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ದೇಶದ ಪ್ರಧಾನಿಯಾಗಿರುತ್ತಿದ್ದರೆ, ಇಂದು ಈ ದೇಶ ನಂ.1 ಸ್ಥಾನದಲ್ಲಿರುತ್ತಿತ್ತು. ವಿಶ್ವಜ್ಞಾನಿ ಅಂಬೇಡ್ಕರರ್ ಅವರ ಸಾಧನೆಯನ್ನು ವಿದೇಶಿಯರೇ ಕೊಂಡಾಡುತ್ತಿದ್ದಾರೆ. ಆದರೆ, ಇಂದು ಭಾರತದಲ್ಲಿ ಅಂಬೇಡ್ಕರ್ ಅವರ ಮಹತ್ವ ಸಾಕಷ್ಟು ಜನರಿಗೆ ತಿಳಿದಿಲ್ಲ. ಆದರೆ. ಹೊಸ ಪೀಳಿಗೆಯ ಯುವಕರು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರೇರಿತರಾಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

‘ನಾನು ಮೊದಲಿಗೂ, ಕೊನೆಗೂ ಇಂಡಿಯನ್’ ಎಂಬ ಅಂಬೇಡ್ಕರ್ ಅವರ ಮಾತುಗಳು, ಅವರೆಂತಹ ದೇಶಪ್ರೇಮಿ ಅನ್ನೋದನ್ನು ತೋರಿಸುತ್ತದೆ. ಅಂಬೇಡ್ಕರ್ ಅವರನ್ನು ಹಡೆದ ಈ ಪುಣ್ಯ ಭೂಮಿ, ಹೆಮ್ಮೆಪಡುತ್ತಿದೆ ಎಂದು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ