ಮನೆ ಮುಟ್ಟುಗೋಲು ಹಾಕಲು ಬಂದ ಪೊಲೀಸರು | ಪೊಲೀಸರು, ಅಧಿಕಾರಿಗಳ ಎದುರೇ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ? - Mahanayaka

ಮನೆ ಮುಟ್ಟುಗೋಲು ಹಾಕಲು ಬಂದ ಪೊಲೀಸರು | ಪೊಲೀಸರು, ಅಧಿಕಾರಿಗಳ ಎದುರೇ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

22/12/2020

ತಿರುವನಂತಪುರಂ: ಮನೆಯನ್ನು ಮುಟ್ಟುಗೋಲು ಹಾಕಲು ಅಧಿಕಾರಿಗಳು ಮತ್ತು ಪೊಲೀಸರು ಬಂದಾಗ ಅಸಹಾಯಕ ವ್ಯಕ್ತಿಯೊಬ್ಬರು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು  ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಕೇರಳದ ತಿರುವನಂತಪುರಂನ ನಯತಿಂಕರ ಎಂಬಲ್ಲಿ ನಡೆದಿದೆ.

ಇಲ್ಲಿನ ನಯ್ಯಾಟಿಂಕಾರ ಪಾಂಗ್ ಮೂಲದ ರಾಜನ್ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ.  ರಾಜನ್ ಅವರು ತಮ್ಮ ಪತ್ನಿಯ ಜೊತೆಗೆ ವಿವಾದಿತ ಜಮೀನಿನಲ್ಲಿ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಹಾಗೂ ಪೊಲೀಸರು ಶೆಡ್ ಮುಟ್ಟುಗೋಲು ಹಾಕಲು ಬಂದಿದ್ದು, ಈ ವೇಳೆ ಏನು ಮಾಡಬೇಕು ಎಂದು ತೋಚದ ರಾಜನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡ ಪರಿಣಾಮ ರಾಜನ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಜನ್  ಬೆಂಕಿ ಹಚ್ಚಿಕೊಂಡ ಸಂದರ್ಭದಲ್ಲಿ ಅವರ ಪತ್ನಿ ಅಂಬಿಲಿ ಹಾಗೂ ಎಸ್ ಐ ಅನೀಲ್ ಕುಮಾರ್ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಅವರಿಗೂ ಗಾಯವಾಗಿದೆ.

ಇತ್ತೀಚಿನ ಸುದ್ದಿ