ಗಂಡನ ಹೀನ ಕೃತ್ಯವನ್ನು ವಿಡಿಯೋ ಮಾಡಿದ ಪತ್ನಿ | ವೈರಲ್ ವಿಡಿಯೋ ನೋಡಿದ ಪೊಲೀಸರಿಂದ ಪತಿಯ ಬಂಧನ - Mahanayaka

ಗಂಡನ ಹೀನ ಕೃತ್ಯವನ್ನು ವಿಡಿಯೋ ಮಾಡಿದ ಪತ್ನಿ | ವೈರಲ್ ವಿಡಿಯೋ ನೋಡಿದ ಪೊಲೀಸರಿಂದ ಪತಿಯ ಬಂಧನ

22/12/2020

ತಿರುವನಂತಪುರಂ: ಕುಡಿತದ ಮತ್ತಿನಲ್ಲಿ ಮಕ್ಕಳಿಗೆ ಹಿಗ್ಗಾಮುಗ್ಗಾ ಹೊಡೆದು, ಅವಾಚ್ಯಪದಗಳಿಂದ ಮಕ್ಕಳಿಗೆ ಬೈದು ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ವಿಡಿಯೋವೊಂದು ವೈರಲ್ ಆದ ಬಳಿಕ ಕೇರಳ ಪೊಲೀಸರು ಸ್ವಯಂ ಪ್ರೇರಿತವಾಗಿ ಬಂಧಿಸಿದ್ದಾರೆ.

ತಂದೆ ಅಟ್ಟಿಂಗಲ್ ನ ಸುನಿಲ್ ಕುಮಾರ್ (45) ತನ್ನ ಇಬ್ಬರು ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಅಮಾನವೀಯವಾಗಿ ಥಳಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ಈತ ಹಲ್ಲೆ ನಡೆಸುತ್ತಿರುವ ಸಂದರ್ಭದಲ್ಲಿ ಮಕ್ಕಳು, “ಹೊಡೆಯಬೇಡಿ” ಎಂದು ಪರಿಪರಿಯಾಗಿ ಬೇಡಿಕೊಂಡರೂ ಆತ ಸುಮ್ಮನಾಗದೇ ಹೊಡೆಯುತ್ತಾಲೇ ಇದ್ದ.

ಮಕ್ಕಳ ಮೇಲಿನ ಹಲ್ಲೆಯನ್ನು ನೋಡಿ ಸಾಕಾಗಿದ್ದ ಆತನ ಪತ್ನಿ, ಗಂಡನಿಗೆ ಬುದ್ಧಿಕಲಿಸಬೇಕು ಎಂದು ವಿಡಿಯೋ ಮಾಡಿದ್ದಳು. ವಿಡಿಯೋ ಮಾಡುವ ಸಂದರ್ಭದಲ್ಲಿ ಸುನೀಲ್ ಕುಮಾರ್ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಪತ್ನಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ವೈರಲ್ ಆಗಿತ್ತು. ಆದರೆ ಇದು ಎಲ್ಲಿ ನಡೆದಿರುವ ಘಟನೆ ಎನ್ನುವುದು ಮಾತ್ರ ಯಾರಿಗೂ ತಿಳಿದಿರಲಿಲ್ಲ.


Provided by

ಮಕ್ಕಳಿಗೆ ಈ ಮಟ್ಟಕ್ಕೆ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಲವಾರು ಸಾರ್ವಜನಿಕರು ಕೇರಳ ಪೊಲೀಸರಿಗೆ ವಿಡಿಯೋ ಕಳುಹಿಸುತ್ತಾರೆ. ಪೊಲೀಸರು ಕೂಡ ಈ ಸುನೀಲ್ ನ ಪತ್ತೆಗೆ ಮುಂದಾಗಲು ಮೊದಲು ಕೇರಳ ಪೊಲೀಸರ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಈ ವಿಡಿಯೋ ಶೇರ್ ಮಾಡಿ, ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಾರೆ. ಆ ಬಳಿಕ ಸುನೀಲ್ ಕುಮಾರ್ ನಲ್ಲಿ ಹೆಡೆಮುರಿಕಟ್ಟಿ ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ