ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಬಂಧನ | ಕಾರಣ ಏನು ಗೊತ್ತಾ?
22/12/2020
ಮುಂಬೈ: ಮುಂಬೈ ವಿಮಾನ ನಿಲ್ದಾಣದ ಬಳಿಯ ಡ್ರಾಗನ್ ಫ್ಲೈ ಕ್ಲಬ್ ಗೆ ದಾಳಿ ನಡೆಸಿದ ಪೊಲೀಸರು ಖ್ಯಾತ ಕ್ರಿಕೆಟಿಗ ಸುರೇಶ್ ರೈನಾ ಹಾಗೂ ಗಾಯಕ ಗುರು ರಾಂಧವ ಅವರನ್ನು ಬಂಧಿಸಿದ್ದಾರೆ.
ಕೋವಿಡ್ ನಿಯಾಮಾವಳಿಗಳ ಉಲ್ಲಂಘನೆ ಮಾಡಿದ ಆರೋಪದಡಿ ಸುರೇಶ್ ರೈನಾ, ಗುರು ರಾಂಧವ ಸೇರಿದಂತೆ 34 ಜನರನನ್ನು ಪೊಲೀಸರು ಬಂಧಿಸಿದರು. ಇವರಲ್ಲಿ ಏಳು ಮಂದಿ ಕ್ಲಬ್ ನ ಉದ್ಯೋಗಿಗಳನ್ನೂ ಬಂಧಿಸಲಾಗಿದೆ.
ಬಂಧಿತರ ಮೇಲೆ ಮೇಲೆ ಐಪಿಸಿ ಸೆಕ್ಷನ್ 188, 269, 34 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಜಾಮೀನಿ ಮೇಲೆ ಬಿಡುಗಡೆ ಮಾಡಲಾಗಿದೆ.