ಜೀಕನ್ನಡ ವಿರುದ್ಧ ಎಫ್ ಐಆರ್ ದಾಖಲು | ಕಾರಣ ಏನು ಗೊತ್ತಾ? - Mahanayaka
3:16 PM Saturday 14 - September 2024

ಜೀಕನ್ನಡ ವಿರುದ್ಧ ಎಫ್ ಐಆರ್ ದಾಖಲು | ಕಾರಣ ಏನು ಗೊತ್ತಾ?

22/12/2020

ಬೆಂಗಳೂರು: ಕನ್ನಡ ಮನರಂಜನಾ ವಾಹಿನಿಗಳಲ್ಲಿಯೇ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿರುವ ‘ಜೀ ಕನ್ನಡ’ದ ವಿರುದ್ಧ ಬ್ಯಾಟರಾಯನಪುರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.

 

ಸರಿಗಮಪ ಫಿನಾಲೆ ಸ್ಪರ್ಧೆಯನ್ನು ಮೈಸೂರು ರಸ್ತೆಯ ಬ್ಯಾಟರಾಜನಪುರ ವ್ಯಾಪ್ತಿಯಲ್ಲಿ ಭಾನುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ವೇಳೆ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.


Provided by

 

ಕಾರ್ಯಕ್ರಮದಲ್ಲಿ ಕೇವಲ 100 ಜನರು ಭಾಗವಹಿಸಲು ಆಯೋಜಕರು ಅನುಮತಿ ಪಡೆದುಕೊಂಡಿದ್ದಾರೆ ಆದರೆ, 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

 

ಕಾರ್ಯಕ್ರಮದ ಸಂದರ್ಭ ಮಾಸ್ಕ್ ಧರಿಸದೇ, ವ್ಯಕ್ತಿ ಅಂತರ ಕಾಪಾಡದೇ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜೊತೆಗೆ ವರದಿಯನ್ನು ಸಿದ್ಧಪಡಿಸಿ ಕೋರ್ಟ್ ಗೆ ಸಲ್ಲಿಸಲಾಗಿದೆ. ಈ ವರದಿ ಆಧರಿಸಿ ಕೋರ್ಟ್ ನೀಡುವ ಸೂಚನೆಯ ಅನ್ವಯ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ