ಗೋವಾದಲ್ಲಿ ಗೋಮಾಂಸದ ಕೊರತೆ | ನೆರೆಯ ರಾಜ್ಯಗಳಿಂದ ಗೋಮಾಂಸ ಖರೀದಿಗೆ ಸರ್ಕಾರ ನಿರ್ಧಾರ - Mahanayaka

ಗೋವಾದಲ್ಲಿ ಗೋಮಾಂಸದ ಕೊರತೆ | ನೆರೆಯ ರಾಜ್ಯಗಳಿಂದ ಗೋಮಾಂಸ ಖರೀದಿಗೆ ಸರ್ಕಾರ ನಿರ್ಧಾರ

22/12/2020

ಪಣಜಿ: ಗೋವಾ ರಾಜ್ಯದಲ್ಲಿ ಗೋಮಾಂಸಕ್ಕೆ ಉತ್ತಮ ಬೇಡಿಕೆಯಿದ್ದು,  ಸದ್ಯ ರಾಜ್ಯವು ಗೋಮಾಂಸದ ಕೊರತೆಯಲ್ಲಿದೆ. ಹಾಗಾಗಿ ನೆರೆಯ ರಾಜ್ಯಗಳಿಂದ ಗೋಮಾಂಸ ಖರೀದಿಸಲಾಗುವುದು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಮಂಗಳವಾರ ಹೇಳಿಕೆ ನೀಡಿದ್ದಾರೆ.


Provided by

ಕರ್ನಾಟಕದಿಂದ ಗೋವಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ಪೂರೈಕೆಯಾಗುತ್ತಿದೆ. ಕರ್ನಾಟಕ ಗೋಮಾಂಸ ನಿಷೇಧಿಸಿರುವುದರಿಂದ ಗೋಮಾಂಸದ ಕೊರತೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.

 ಗೋ ಮಾಂಸವನ್ನು ಪೂರೈಕೆ ಮಾಡುವ ಏಜೆಂಟರು ಬೇಡಿಕೆಗೆ ತಕ್ಕಷ್ಟು ಮಾಂಸ ಖರೀದಿಸಲು ವಿಫಲರಾದರೆ, ಅವರು ನೆರೆ ರಾಜ್ಯಗಳಿಂದ ಗೋವುಗಳನ್ನು ಖರೀದಿಸಬಹುದು. ಅವುಗಳನ್ನು ಗೋವಾ ಮೀಟ್‌ ಕಾಂಪ್ಲೆಕ್ಸ್‌ ಲಿ. (ಜಿಎಂಸಿಎಲ್‌)ನಲ್ಲಿ ವಧೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ