ಮಾಸ್ಕ್ ಧರಿಸದ ಯುವಕನಿಗೆ ಲಾಠಿಯಿಂದ ಥಳಿಸಿದ ಪೊಲೀಸರು | ಕರ್ತವ್ಯ ವಾಪ್ತಿ ಮೀರಿದ ಪೊಲೀಸ್ ವಿರುದ್ಧ ಸಾರ್ವಜನಿಕರಿಂದ ಪ್ರತಿಭಟನೆ
23/12/2020
ಚಿಕ್ಕಮಗಳೂರು: ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕಾಗಿ ಪೊಲೀಸರು ತಮ್ಮ ಕರ್ತವ್ಯದ ವ್ಯಾಪ್ತಿ ಮೀರಿ ಯುವಕನಿಗೆ ಥಳಿಸಿದ್ದು, ಇದರ ವಿರುದ್ಧ ಸಾರ್ವಜನಿಕರು ಪ್ರತಿಭಟಿಸಿದ ಘಟನೆ ನಡೆದಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ಪೊಲೀಸರು ತಮ್ಮ ಅಧಿಕಾರದ ವ್ಯಾಪ್ತಿ ಮೀರಿ ಲಾಠಿಯಿಂದ ಯುವಕನಿಗೆ ಥಳಿಸಿದ್ದರು. ಮಾಸ್ಕ್ ಧರಿಸಿಲ್ಲವೆಂದರೆ, ದಂಡ ವಿಧಿಸುವ ಹಕ್ಕು ಮಾತ್ರವೇ ಪೊಲೀಸರಿಗೆ ಇದೆ. ಲಾಠಿಯಿಂದ ಹೊಡೆಯುವ ಅಧಿಕಾರ ಯಾರು ಕೊಟ್ಟರು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಪೊಲೀಸ್ ಇನ್ಸ್‌ಪೆಕ್ಟರ್ ಶಂಭು ಲಿಂಗಯ್ಯ ಅವರು, ಲಕ್ಷ್ಮಣ ಎಂಬ ಯುವಕನಿಗೆ ಲಾಠಿಯಿಂದ ಹೊಡೆದಿದ್ದು, ಪರಿಣಾಮವಾಗಿ ಅವರ ಮೂಗು, ಕಣ್ಣಿಗೆ ಗಾಯವಾಗಿದೆ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಘಟನೆ ಸಂಬಂಧ ಪಿಎಸ್ ಐ ಶಂಭುಲಿಂಗಯ್ಯರನ್ನು ತರಾಟೆಗೆತ್ತಿಕೊಂಡ ಸಾರ್ವಜನಿಕರು ಸಾರ್ವಜನಿಕರು ಇನ್ಸ್ ಪೆಕ್ಟರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.