ಭದ್ರಾ ರಿಸರ್ವ್ ಫಾರೆಸ್ಟ್ ನಲ್ಲಿ ಆನೆ ಹಂತಕರ ತಂಡ ಸಕ್ರೀಯ?: ಪತ್ತೆಯಾಯ್ತು ಆನೆ ಕಳೇಬರ!
ಚಿಕ್ಕಮಗಳೂರು: ಭದ್ರಾ ರಿಸರ್ವ್ ಫಾರೆಸ್ಟ್ ನಲ್ಲಿ ಆನೆ ಹಂತಕರ ತಂಡ ಸಕ್ರೀಯವಾಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ದಂತಕ್ಕಾಗಿ ಆನೆಗೆ ಗುಂಡಿಟ್ರಾ ಕಾಡುಗಳ್ಳ ದಂತಚೋರರು ಎನ್ನುವ ಶಂಕೆ ವ್ಯಕ್ತವಾಗಿದೆ.
ತರೀಕೆರೆ ತಾಲೂಕಿನ ಭದ್ರಾ ಮೀಸಲು ಅರಣ್ಯದ ಅಲ್ದಾರ ಬಳಿ ಆನೆ ಕಳೇಬರವೊಂದು ಪತ್ತೆಯಾಗಿದೆ. ಆನೆಯ ಹಣೆ ಮೇಲೆ 2 ಇಂಚಿನಷ್ಟು ಅಗಲದ ಗುಂಡಿನ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.
ಆನೆ ತಿಂಗಳ ಹಿಂದೆಯೇ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಅಲ್ದಾರ ವಿಭಾಗದ ಭೈರಾಪುರ ವ್ಯಾಪ್ತಿಯಲ್ಲಿ ಯತೇಚ್ಛವಾಗಿ ಕಾಡಾನೆಗಳಿವೆ. ಈ ಪ್ರದೇಶದಲ್ಲಿ ಆನೆ ಕಳೇಬರ ಇರುವ ಬಗ್ಗೆ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಆನೆ ಸತ್ತ ಜಾಗದಲ್ಲಿ ಆನೆ ದಂತಗಳು ಪತ್ತೆಯಾಗಿಲ್ಲ ಹೀಗಾಗಿ ದಂತಕ್ಕಾಗಿ ಆನೆಗೆ ಗುಂಡಿಟ್ಡು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಆನೆ ಸತ್ತು ತಿಂಗಳಾದರೂ ವಿಷಯ ಅರಣ್ಯ ಇಲಾಖೆ ಗಮನಕ್ಕೆ ಬಂದಿಲ್ವಾ…? ಎನ್ನುವ ಪ್ರಶ್ನೆಗಳೂ ಕೇಳಿ ಬಂದಿವೆ.
ಆನೆ ಕಳೆಬರಹವನ್ನ ಅಧಿಕಾರಿಗಳು ಸರಿಯಾಗಿ ತಪಾಸಣೆ ಮಾಡಿಲ್ಲ ಎಂಬ ಅನುಮಾನ ಪರಿಸರವಾದಿಗಳು ವ್ಯಕ್ತಪಡಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: