ಹೆಲ್ಮೆಟ್ ಧರಿಸಿದರೂ ಉಳಿಯಲಿಲ್ಲ ಜೀವ: ಬಸ್ ಹರಿದು ಬೈಕ್ ಸವಾರ ಸಾವು
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಬೈಕ್ ಸವಾರರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಗರದ ಟಾಟಾ ಇನ್ಸ್ಸ್ಟಿಟ್ಯೂಟ್ ಮುಂಭಾಗದಲ್ಲಿ ನಡೆದಿದೆ.
ಈಶ್ವರ್(43) ಮೃತಪಟ್ಟ ಬೈಕ್ ಸವಾರನಾಗಿದ್ದು, ಯಶವಂತಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಯಲಹಂಕದಿಂದ ಯಶವಂತಪುರಕ್ಕೆ ಬಿಎಂಟಿಸಿ ಬಸ್ ತೆರಳುತ್ತಿತ್ತು, ಈ ವೇಳೆ ಕಾರ್ ಗೆ ಬೈಕ್ ತಾಗಿ ಬೈಕ್ ಸವಾರ ಈಶ್ವರ್ ಕೆಳಕ್ಕೆ ಬಿದ್ದಿದ್ದಾರೆ. ಅವರ ತಲೆ ಮೇಲೆ ಬಸ್ನ ಹಿಂದಿನ ಚಕ್ರ ಹರಿದಿದೆ.
ಹೆಲ್ಮೆಟ್ ಧರಿಸಿದ್ದರೂ ಉಳಿಯಲಿಲ್ಲ ಜೀವ:
ಈಶ್ವರ್ ಅವರು ಕೆಂಪು ಬಣ್ಣದ ಫುಲ್ ಹೆಲ್ಮೆಟ್ ಧರಿಸಿದ್ದರೂ, ಅವರ ಜೀವ ಉಳಿಯಲಿಲ್ಲ, ಅವರ ತಲೆಯ ಮೇಲೆ ಬಸ್ ನ ಚಕ್ರ ಹರಿದ ವೇಳೆ ಹೆಲ್ಮೆಟ್ ನೊಳಗೆಯೇ ತಲೆ ಛಿದ್ರಗೊಂಡಿದೆ. ವಿದ್ಯಾರಣ್ಯಪುರ ನಿವಾಸಿಯಾಗಿರುವ ಈಶ್ವರ್, ಚಿನ್ನ ಬೆಳ್ಳಿ ವ್ಯಾಪಾರ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಪತ್ನಿ ಇದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: