ಪ್ರವಾದಿ ವಿರುದ್ಧ ಭಾಷಣ: ಪುರೋಹಿತನ ವಿರುದ್ಧ ಎಫ್ ಐಆರ್ ದಾಖಲು
ಪ್ರವಾದಿ ಮುಹಮ್ಮದರ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ದಸ್ನಾದೇವಿ ಮಂದಿರದ ಪ್ರಧಾನ ಪುರೋಹಿತ ಯತಿ ನರಸಿಂಹಾನಂದ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಕೇಸು ದಾಖಲಿಸಿದ್ದಾರೆ. ಸೆಪ್ಟೆಂಬರ್ 29ರಂದು ಗಾಜಿಯಾಬಾದ್ ನ ಹಿಂದಿ ಭವನ್ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಪ್ರವಾದಿ ಮುಹಮ್ಮದರ ವಿರುದ್ಧ ದ್ವೇಷ ಭಾಷಣ ಮಾಡಿದ್ದರು.
ದಸರಾದಲ್ಲಿ ಪ್ರತಿ ಕೃತಿ ದಹಿಸುವುದಾದರೆ ನೀವು ಮುಹಮ್ಮದರ ಪ್ರತಿ ಕೃತಿಯನ್ನು ದಹಿಸಬೇಕು ಎಂದು ನರಸಿಂಗಾನಂದ ಹೇಳಿದ್ದಾರೆ. ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. ನರಸಿಂಗಾನಂದ ಅವರನ್ನು ಅರೆಸ್ಟ್ ಮಾಡಬೇಕು ಎಂದು ಸಾರ್ವಜನಿಕರಿಂದ ಬಲವಾದ ಒತ್ತಡ ಕೇಳಿ ಬಂದಿದೆ. ಅರೆಸ್ಟ್ ನರಸಿಂಗಾನಂದ್ ಎಂಬ ಹಾಶ್ ಟಾಗ್ ಎಕ್ಸ್ ನಲ್ಲಿ ಕಾಣಿಸಿಕೊಂಡಿದೆ.
1 ಲಕ್ಷಕ್ಕಿಂತಲೂ ಅಧಿಕ ಮಂದಿ ಈ ಹಾಸ್ಟಾಗ್ ಅನ್ನು ಉಪಯೋಗಿಸಿ ಪ್ರತಿಕ್ರಿಯಿಸಿದ್ದಾರೆ. ಧರ್ಮ ದ್ವೇಷವನ್ನು ಪ್ರಚೋದನೆಗೊಳಿಸಿದ 302ನೇ ಸೆಕ್ಷನ್ ಅಡಿಯಲ್ಲಿ ಇದೀಗ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ನರಸಿಂಗಾನಂದ ಅವರ ಭಾಷಣ ಅತ್ಯಂತ ಪ್ರಚೋದನಕಾರಿಯಾಗಿದೆ ಮತ್ತು ಅವರನ್ನು ತಕ್ಷಣ ಬಂದಿಸಬೇಕು ಎಂದು ಕೋರಿ ಜಮೀಯತೆ ಉಲಮಾಯೆ ಹಿಂದ್ ನ ಅಧ್ಯಕ್ಷ ಮೌಲಾನ ಮಹಮೂದ್ ಮದನಿ ಅವರು ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth