ಫೈರ್ ಹೇರ್ ಕಟ್ ವೇಳೆ ಯಡವಟ್ಟು: ಯುವಕನ ತಲೆಗೆ ಬೆಂಕಿ ಹತ್ತಿಕೊಂಡು ಗಂಭೀರ ಗಾಯ - Mahanayaka

ಫೈರ್ ಹೇರ್ ಕಟ್ ವೇಳೆ ಯಡವಟ್ಟು: ಯುವಕನ ತಲೆಗೆ ಬೆಂಕಿ ಹತ್ತಿಕೊಂಡು ಗಂಭೀರ ಗಾಯ

fire haircut
28/10/2022

ಗಾಂಧಿನಗರ: ಇತ್ತೀಚೆಗೆ ಯುವಕರ ಅಚ್ಚುಮೆಚ್ಚಿನ ಹೇರ್ ಕಟ್ ಆಗುತ್ತಿರುವ ಫೈರ್ ಕಟ್ ಯುವಕನೋರ್ವನ ಬದುಕಿನಲ್ಲಿ ಅನಾಹುತವೇ ಸೃಷ್ಟಿಸಿದೆ.  ಫೈರ್ ಕಟ್ಟಿಂಗ್ ಮಾಡಿಸಿಕೊಳ್ಳುತ್ತಿದ್ದ ವೇಳೆ ವೇಳೆ ಯುವಕನ ತಲೆಗೆ ಬೆಂಕಿ ಹತ್ತಿಕೊಂಡ ಘಟನೆ ನಡೆದಿದ್ದು, ಯುವಕನಿಗೆ ಗಂಭೀರ ಸುಟ್ಟಗಾಯಗಳಾಗಿವೆ.

ಗುಜರಾತ್ ನ ವಲಸಾಡ್ ಜಿಲ್ಲೆಯ ವಾಪಿ ನಗರದ ಸಲೂನ್ ನಲ್ಲಿ ಈ ಆವಾಂತರ ಸೃಷ್ಟಿಯಾಗಿದ್ದು, ಹೇರ್ ಕಟ್ ಮಾಡಿಸಿಕೊಳ್ಳುತ್ತಿದ್ದ ವೇಳೆ ಫೈರ್ ಹೇರ್ ಕಟ್ಟಿಂಗ್ ಮಾಡಲು, ಕ್ಷೌರಿಕ  ತಲೆಗೆ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಯುವಕನ ತಲೆಗೆ ಬೆಂಕಿ ವ್ಯಾಪಿಸಿದ್ದು, ತಲೆ, ಎದೆ, ಕುತ್ತಿಗೆಗೆ ಗಂಭೀರವಾದ ಸುಟ್ಟಗಾಯಗಳಾಗಿವೆ.

ಯುವಕನನ್ನು ತಕ್ಷಣವೇ  ಸೂರತ್ ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಘಟನೆ ವೇಳೆ ಸಲೂನ್ ನಲ್ಲಿ ಇದ್ದವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗಾಯಾಳು ಯುವಕನ ಸ್ನೇಹಿತ ಈ ವಿಡಿಯೋವನ್ನು ಸೆರೆ ಹಿಡಿದಿದ್ದ  ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ