ಚರಂಡಿಗೆ ಬಿದ್ದ ನಾಯಿ ಮರಿ: ಅಗ್ನಿಶಾಮಕ ದಳದಿಂದ ನಾಯಿಮರಿಯ ರಕ್ಷಣೆ
ಚಿಕ್ಕಮಗಳೂರು: ತಾಯಿ ಜೊತೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೃಹತ್ ಚರಂಡಿಗೆ ಬಿದ್ದ ನಾಯಿ ಮರಿಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಳಿ ನಡೆದಿದೆ.
ಚರಂಡಿಗೆ ಬಿದ್ದ ಮರಿಯನ್ನು ಮೇಲೆ ಎಳೆಯಲಾಗದೇ ನಾಯಿ ಕೂಗುತ್ತಿತ್ತು. ಚರಂಡಿ ನೀರಿನಲ್ಲಿ ನಾಯಿ ಮರಿ ತೇಲಿ ಹೋಗುತ್ತಿತ್ತು. ಡ್ರೈನೇಜ್ ಪೈಪ್ ಹಿಡಿದು ನಾಯಿ ಮರಿ ನಿಂತಿತ್ತು ತಾಯಿ ನಾಯಿಯ ಕೂಗು ನೋಡಿ ಮರುಗಿದ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಡ್ರೈನೇಜ್ ಒಳಗಡೆ ಹೋಗಿ ಸ್ಲಾಬ್ ತೆಗೆದು ನಾಯಿಮರಿಯನ್ನು ರಕ್ಷಿಸಿದ್ದಾರೆ. ಚರಂಡಿಯಿಂದ ಮರಿಯನ್ನು ಮೇಲೆತ್ತುತ್ತಿದ್ದಂತೆಯೇ ತಾಯಿ ನಾಯಿ ಮರಿಯ ಬಳಿಗೆ ಓಡಿ ಬಂದ ದೃಶ್ಯ ಕಂಡು ಬಂತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7