2 ವರ್ಷದ ಮಗಳನ್ನು ಕೂರಿಸಿಕೊಂಡೇ ಫುಡ್ ಡೆಲಿವರಿ: ಇವರ ಕಥೆ ಕೇಳಿ ನೆಟ್ಟಿಗರ ಮನಕರಗಿತು

ತನ್ನ 2 ವರ್ಷದ ಮಗಳನ್ನು ಬೈಕ್ ನಲ್ಲಿ ಕೂರಿಸಿಕೊಂಡು ಡೆಲಿವರಿ ಬಾಯ್ ವೊಬ್ಬರು ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಅವರನ್ನ ವಿಚಾರಿಸಿದಾಗ ಅವರ ಕರುಣಾಜನಕ ಕಥೆ ತಿಳಿದು ಬಂದಿದೆ.
ದೆಹಲಿಯ ಖಾನ್ ಮಾರ್ಕೆಟ್ ಬಳಿ ಇರುವ ಸ್ಟಾರ್ ಬಕ್ಸ್ ಶಾಪ್ ಗೆ ಆರ್ಡರ್ ಪಡೆದುಕೊಳ್ಳಲು ಬಂದ ಜೊಮೆಟೋ ಡೆಲಿವರಿ ಎಜೆಂಟ್ ಸೋನು ಬಂದಿದ್ದಾರೆ. ಅವರ ಜೊತೆಗೆ 2 ವರ್ಷದ ಮಗಳೂ ಇರುವುದನ್ನು ಕಂಡು ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರ ಕುತೂಹಲದಿಂದ, ಮಗಳನ್ನು ಕೂಡ ಯಾಕೆ ಜೊತೆಗೆ ಕರೆದೊಯ್ಯುತ್ತಿದ್ದೀರಿ ಅಂತ ಪ್ರಶ್ನಿಸಿದ್ದಾರೆ.
ಈ ವೇಳೆ ಸೋನು ತನ್ನ ಸಂಕಷ್ಟದ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ. ಸೋನು ಸಿಂಗಲ್ ಪೇರೆಂಟ್ ಆಗಿದ್ದಾರೆ. ಹೀಗಾಗಿ ತನ್ನ ಮಗಳನ್ನು ಸಾಕಲು ಅವರು ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಜೀವನ ಸಾಗಿಸಲು ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ತನ್ನ ಜೊತೆಗೆ ಕೆಲಸಕ್ಕೆ ಹೋಗುವಾಗ ಮಗಳನ್ನೂ ಜೊತೆಗೆ ಕರೆದೊಯ್ಯುತ್ತಿದ್ದಾರೆ. ಆದರೆ ಮಗಳ ನಗು ಅವರಲ್ಲಿ ಉತ್ಸಾಹ ಚೈತನ್ಯವನ್ನು ಕಡಿಮೆ ಮಾಡಿಲ್ಲವಂತೆ.
ಡೆಲಿವರಿ ಬಾಯ್ ಸೋನು ಅವರ ಕಥೆ ಕೇಳಿದ ಶಾಪ್ ಮ್ಯಾನೇಜರ್ ದೇವೇಂದ್ರ ಮೆಹ್ರ ಮಗಳಿಗೆ ಸ್ಟಾರ್ ಬಕ್ಸ್ನ ಐಸ್ ಕ್ರೀಮ್ ತಿನಿಸನ್ನು ಉಚಿತವಾಗಿ ನೀಡಿದ್ದಾರೆ.
ಸೋನು ಅವರ ಜೀವನ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡಿದೆ. ಸೋನು ಸಾಕಷ್ಟು ಸಿಂಗಲ್ ಪೇರೆಂಟ್ ಗಳ ಪ್ರತಿನಿಧಿಯಂತೆ ಕಾಣುತ್ತಿದ್ದಾರೆ ಅನ್ನೋ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.