ಯೋಗಿಯ ಬುಲ್ಡೋಜರ್ ನೀತಿ: ಸುಪ್ರೀಂಕೋರ್ಟ್ ನಲ್ಲಿ ಎರಡು ಪ್ರಕರಣ ದಾಖಲು - Mahanayaka

ಯೋಗಿಯ ಬುಲ್ಡೋಜರ್ ನೀತಿ: ಸುಪ್ರೀಂಕೋರ್ಟ್ ನಲ್ಲಿ ಎರಡು ಪ್ರಕರಣ ದಾಖಲು

04/09/2024

ಬುಲ್ಡೋಜರ್ ನೀತಿಗೆ ಸಂಬಂಧಿಸಿದ ಎಪಿಸಿಆರ್ ಅಥವಾ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸಂಸ್ಥೆಯು ಸುಪ್ರೀಂಕೋರ್ಟ್ ನಲ್ಲಿ ಎರಡು ಪ್ರಕರಣವನ್ನ ದಾಖಲಿಸಿದೆ. ಇದನ್ನು ಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ. ಇತ್ತೀಚಿಗೆ ಮಧ್ಯಪ್ರದೇಶದ ಉದಯಪುರ ಮತ್ತು ಜಾವ್ರ ಪ್ರದೇಶದಲ್ಲಿ ಸರ್ಕಾರ ಬುಲ್ಡೋಜರ್ ನಿಂದ ಮುಸ್ಲಿಮರ ಮನೆಯನ್ನು ಉರುಳಿಸಿದ್ದು ಈ ಪ್ರಕರಣವನ್ನು ಎಪಿಸಿಆರ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದೆ.

ಉದಯಪುರದಲ್ಲಿ ರಶೀದ್ ಖಾನ್ ಅವರ ಮನೆಯನ್ನ ದ್ವಂಸಗೊಳಿಸಲಾಗಿತ್ತು. ಅವರು ಯಾವುದೇ ಅಪರಾಧದಲ್ಲಿ ಭಾಗಿಯಾಗಿರಲಿಲ್ಲ. ಅವರ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಯ ಮಗನೊಬ್ಬ ಗಲಭೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಹೊರಿಸಿ ಸರ್ಕಾರ ಈ ಮನೆ ದ್ವಂಸ ಕಾರ್ಯ ನಡೆಸಿತ್ತು. ಜವ್ರದಲ್ಲಿ ಮೊಹಮ್ಮದ್ ಹುಸೇನ್ ಅವರ ತಂದೆಯ ಮನೆಯನ್ನು ದ್ವಂಸಗೊಳಿಸಲಾಗಿತ್ತು..

ಅವರ ಮಗನ ಮೇಲಿನ ಆರೋಪಕ್ಕಾಗಿ ಈ ಕೃತ್ಯವೆಸಗಲಾಗಿತ್ತು. ಈ ಎರಡು ಧ್ವಂಸ ಕಾರ್ಯಗಳು ಕಾನೂನುಬಾಹಿರವಾಗಿ ಮತ್ತು ಅನ್ಯಾಯವಾಗಿ ನಡೆದಿದೆ ಎಂದು ಆರೋಪಿಸಲಾಗಿದೆ. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ನ್ಯಾಯವಾದಿಗಳಾದ ಉದಯ್ ಸಿಂಗ್, ಫೌಝಿಯ ಶಕೀಲ್, ಅಜಯ್ ಸಿಂಗ್ ಮತ್ತು ಹುಝಯ್ ಫಾ ವಾದಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ