ರಾಜಕಾರಣಿಯಾಗಿ ಬದಲಾದ ಕುಸ್ತಿಪಟುಗಳು: ಕಾಂಗ್ರೆಸ್ ಪಾಳಯ ಸೇರಿದ ಸ್ಟಾರ್ ಪ್ಲೇಯರ್ಸ್ - Mahanayaka

ರಾಜಕಾರಣಿಯಾಗಿ ಬದಲಾದ ಕುಸ್ತಿಪಟುಗಳು: ಕಾಂಗ್ರೆಸ್ ಪಾಳಯ ಸೇರಿದ ಸ್ಟಾರ್ ಪ್ಲೇಯರ್ಸ್

04/09/2024

ಕುಸ್ತಿಪಟುಗಳಾದ ವಿನೇಶ್ ಪೊಗಾಟ್ ಮತ್ತು ಬಜರಂಗ್ ಪುನಿಯ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದು ಹರಿಯಾಣದ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಹರಿಯಾಣದ ಬಿಜೆಪಿ ಸರ್ಕಾರ ಮರು ಆಯ್ಕೆಯನ್ನು ಬಯಸುತ್ತಿದ್ದು ಈ ಇಬ್ಬರ ಕಾಂಗ್ರೆಸ್ ಸೇರ್ಪಡೆಯು ಬಿಜೆಪಿಯ ಗೆಲುವಿಗೆ ತಡೆಯಾಗಬಹುದು ಎಂದು ಹೇಳಲಾಗುತ್ತಿದೆ.


Provided by

ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಬುಧವಾರ ಕಾಂಗ್ರೆಸ್ ಸೇರಿದ್ದಾರೆ ಮತ್ತು ಮುಂದಿನ ತಿಂಗಳು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 30 ವರ್ಷದ ಫೋಗಟ್ ಅವರು ಜನನಾಯಕ್ ಜನತಾ ಪಕ್ಷದ ಅಮರ್ಜೀತ್ ಧಂಡಾ ಹೊಂದಿರುವ ಜುಲಾನಾ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆಯಿದೆ. 30 ವರ್ಷದ ಪುನಿಯಾ ಅವರು ಕಾಂಗ್ರೆಸ್ ನ ಬದ್ಲಿ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.

ಈ ಇಬ್ಬರೂ ಇಂದು ಮಧ್ಯಾಹ್ನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಫೋಗಟ್ ಮತ್ತು ಪುನಿಯಾ ಅವರು ಕಾಂಗ್ರೆಸ್ ಸೇರಿರುವುದು ಮಹತ್ವದ್ದಾಗಿದೆ. ಯಾಕೆಂದರೆ ಅದು ಚುನಾವಣಾ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡುತ್ತಿದೆ ಮತ್ತು ಆಮ್ ಆದ್ಮಿ ಪಕ್ಷದೊಂದಿಗೆ ಸೀಟು ಹಂಚಿಕೆ ಮಾತುಕತೆಯಲ್ಲಿ ತೊಡಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ