ಕೆಲಸ ಕೊಟ್ಟ ಕಂಪನಿಯಿಂದಲೇ 21 ಲಕ್ಷ ದರೋಡೆ ಮಾಡಿದ: ಒಂದು ತಿಂಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದ ಫ್ಲಿಪ್ ಕಾರ್ಟ್ ನ ಮಾಜಿ ಉದ್ಯೋಗಿ..! - Mahanayaka

ಕೆಲಸ ಕೊಟ್ಟ ಕಂಪನಿಯಿಂದಲೇ 21 ಲಕ್ಷ ದರೋಡೆ ಮಾಡಿದ: ಒಂದು ತಿಂಗಳ ನಂತರ ಪೊಲೀಸರ ಕೈಗೆ ಸಿಕ್ಕಿಬಿದ್ದ ಫ್ಲಿಪ್ ಕಾರ್ಟ್ ನ ಮಾಜಿ ಉದ್ಯೋಗಿ..!

15/11/2023

ಹರಿಯಾಣದ ಸೋನಿಪತ್ ನಲ್ಲಿರುವ ಫ್ಲಿಪ್ ಕಾರ್ಟ್ ಕಚೇರಿಯಿಂದ ಗನ್ ಪಾಯಿಂಟ್ ನಲ್ಲಿ 21 ಲಕ್ಷ ರೂ.ಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ಗೋಹಾನಾ ಪೊಲೀಸರು ಬಂಧಿಸಿದ್ದಾರೆ. ಮೂರನೇ ಆರೋಪಿಗಾಗಿ ಶೋಧ ನಡೆಯುತ್ತಿದೆ.

ಪ್ರಮುಖ ಆರೋಪಿ ಸುಮಿತ್ ಕಂಪನಿಯ ಮಾಜಿ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಫ್ಲಿಪ್ ಕಾರ್ಟ್ ನಲ್ಲಿ ಕೆಲಸ ಮುಗಿಸಿದ್ದ ಸುಮಿತ್ ತನ್ನ ಸಹಚರರಾದ ಅನಿಲ್ ಟೈಗರ್ ಮತ್ತು ಸಂದೀಪ್ ಜತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ.
ಅಕ್ಟೋಬರ್ 16 ರಂದು ಈ ದರೋಡೆ ಪ್ರಕರಣ ನಡೆದಿದ್ದು, ತನಿಖೆಯ ಸಮಯದಲ್ಲಿ ಅಧಿಕಾರಿಗಳು ಒಂದು ತಿಂಗಳ ನಂತರ ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ.

ದೀಪಾವಳಿ ಋತುವಿನಲ್ಲಿ ಕಚೇರಿಯಲ್ಲಿ ಹೆಚ್ಚಿದ ಹಣದ ಹರಿವಿನ ಬಗ್ಗೆ ಸುಮಿತ್ ಗೆ ಚೆನ್ನಾಗಿ ತಿಳಿದಿತ್ತು ಎಂದು ಗೊಹಾನಾ ಉಪ ಪೊಲೀಸ್ ಆಯುಕ್ತ ಭಾರತಿ ದಬಾಸ್ ಹೇಳಿದ್ದಾರೆ. ದರೋಡೆಯ ಸಮಯವನ್ನು ಯೋಜಿಸಲು ಸುಮಿತ್ ಪ್ಲ್ಯಾನ್ ಮಾಡಿದ್ದ ಎಂದು ಅವರು ಹೇಳಿದರು.
ಆರೋಪಿಗಳು ಅಕ್ಟೋಬರ್ 16 ರಂದು ಆಟಿಕೆ ಪಿಸ್ತೂಲ್ ಬಳಸಿ ದರೋಡೆ ಮಾಡಿದ್ದಾರೆ. ಅಧಿಕಾರಿಗಳು ಸುಮಿತ್ ಮತ್ತು ಅನಿಲ್ ಅವರನ್ನು ಬಂಧಿಸಿದ್ದು, ಈಗ ಮೂರನೇ ಶಂಕಿತ ಆರೋಪಿ ಸಂದೀಪ್ ಗಾಗಿ ಹುಡುಕುತ್ತಿದ್ದಾರೆ.

ಆರೋಪಿಗಳಿಂದ 6.3 ಲಕ್ಷ ರೂಪಾಯಿ, ಕಾರು, ಆಟಿಕೆ ಪಿಸ್ತೂಲ್ ಮತ್ತು ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದ್ದು, ಉಳಿದ ಹಣ ಎಲ್ಲಿದೆ ಎಂದು ತನಿಖೆ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ