ಬೇಟೆಯಾಡಲು ಹೊರಟಿದ್ದ ವೇಳೆ ನಡೀತು ಮಹಾ ಅವಘಡ: ಜಿಂಕೆ ಬದಲು ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ ವ್ಯಕ್ತಿ..! - Mahanayaka
12:44 AM Tuesday 27 - February 2024

ಬೇಟೆಯಾಡಲು ಹೊರಟಿದ್ದ ವೇಳೆ ನಡೀತು ಮಹಾ ಅವಘಡ: ಜಿಂಕೆ ಬದಲು ಸ್ನೇಹಿತನನ್ನೇ ಗುಂಡಿಕ್ಕಿ ಕೊಂದ ವ್ಯಕ್ತಿ..!

15/11/2023

ತಮಿಳುನಾಡಿನ ಜಾವಡಿ ಬೆಟ್ಟದಲ್ಲಿ ಜಿಂಕೆಯನ್ನು ಗುರಿಯಾಗಿಸಿಕೊಂಡ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ತನ್ನ ಸ್ನೇಹಿತನನ್ನು ಗುಂಡಿಕ್ಕಿ ಕೊಂದು ಇನ್ನೊಬ್ಬನನ್ನು ಗಾಯಗೊಳಿಸಿದ ಘಟನೆ ನಡೆದಿದೆ.

ಜಮುನಮರಥೂರಿನ ಶಕ್ತಿವೇಲ್, ಪ್ರಕಾಶ್ ಮತ್ತು ಶಕ್ತಿವಾಸನ್ ಅವರು ದೀಪಾವಳಿಯ ಸಮಯದಲ್ಲಿ ಜಿಂಕೆಯನ್ನು ಅಕ್ರಮವಾಗಿ ಬೇಟೆಯಾಡಿ ತಿನ್ನಲು ಬೆಟ್ಟ ಶ್ರೇಣಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ತಂಡದ ಸದಸ್ಯರಲ್ಲಿ ಓರ್ವ ಜಿಂಕೆಯನ್ನು ಗುರಿಯಾಗಿಸುತ್ತಿದ್ದಾಗ ಗುಂಡು ಶಕ್ತಿವೇಲ್ ಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಪ್ರಕಾಶ್ ಅವರ ಮುಖಕ್ಕೆ ಗಾಯವಾಗಿದೆ.

ಪೊಲೀಸರ ಪ್ರಕಾರ, ಶಕ್ತಿವೇಲ್ ಅವರ ಸಂಬಂಧಿಕರು ಪೊಲೀಸರಿಗೆ ಅಥವಾ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಶವವನ್ನು ಹೂಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಜಮುನಮರಥೂರ್ ಪೊಲೀಸರು ಶವವನ್ನು ಹೊರತೆಗೆದು ಶವಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ಮೂರನೇ ಶಂಕಿತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ