ಭಾರೀ ಮಳೆಗೆ ಮನೆಯ ಮುಂಭಾಗವೇ ಕುಸಿದು ಅಪಾಯದ ಸ್ಥಿತಿಯಲ್ಲಿರುವ ಮನೆ: ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು - Mahanayaka

ಭಾರೀ ಮಳೆಗೆ ಮನೆಯ ಮುಂಭಾಗವೇ ಕುಸಿದು ಅಪಾಯದ ಸ್ಥಿತಿಯಲ್ಲಿರುವ ಮನೆ: ಸ್ಥಳಕ್ಕೆ ಭೇಟಿ ನೀಡದ ಅಧಿಕಾರಿಗಳು

rain
16/10/2024

ಚಿಕ್ಕಮಗಳೂರು: ಕಾಫಿನಾಡಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆಗೆ ಮನೆಯೊಂದರ ಮುಂಭಾಗದಲ್ಲೇ ಭೂಕುಸಿತ ಸಂಭವಿಸಿದ್ದು, ಪರಿಣಾಮವಾಗಿ ಮನೆಯ ಗೋಡೆಗಳು ಬಿರುಕುಗೊಂಡಿದೆ.

ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಘಟನೆ ನಡೆದಿದೆ. ಲೀಲಾ ಎಂಬ ಅಂಗವಿಕಲೆಗೆ ಸೇರಿದ ಮನೆಯ ಮುಂಭಾಗದಲ್ಲೇ ಭೂಕುಸಿತ ಸಂಭವಿಸಿದೆ.

ಪತಿ ಸಾವನ್ನಪ್ಪಿದ ಬಳಿಕ ಏಕಾಂಗಿಯಾಗಿ ಲೀಲಾ ಬದುಕುತ್ತಿದ್ದಾರೆ. ಮನೆ ಬಿದ್ದು 2 ದಿನವಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ಅಮಾನವೀಯತೆ ಮೆರೆದಿದ್ದಾರೆ
ಮನೆಯ ಮುಂಭಾಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದರೆ ಮನೆಯೇ ಬಿದ್ದು ಹೋಗುವ ಸಾಧ್ಯತೆ ಇದೆ. ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ