ತುಂಗಾನಗರ ಪೊಲೀಸರ ಮಿಂಚಿನ ಕಾರ್ಯಚರಣೆ  |  ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ನ ಬಂಧನ - Mahanayaka

ತುಂಗಾನಗರ ಪೊಲೀಸರ ಮಿಂಚಿನ ಕಾರ್ಯಚರಣೆ  |  ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿ ಶೀಟರ್ ನ ಬಂಧನ

09/11/2020

ವರದಿ: ಕೋಗಲೂರು ಕುಮಾರ್


Provided by

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ರೌಡಿಶೀಟರ್ ವೋರ್ವನನ್ನು ಮಿಂಚಿನ ಕಾರ್ಯಾಚರಣೆ ನಡೆಸಿ ಪಿಎಸ್ ಐ ಆಗಿರುವ ತಿರುಮಲೆಶ್  ಜಿ. ಹಾಗೂ ತಂಡ ಹೆಡೆಮುರಿಕಟ್ಟಿದ್ದು,  ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ರೌಡಿ ಶೀಟರ್ ಕಡೇಕಲ್ ಅಬೀದ್ ಬಂಧಿತ ರೌಡಿಶೀಟರ್ ಆಗಿದ್ದಾನೆ. ಈತ ಇಂದಿರಾ ನಗರದ ಶ್ರೀರಾಮ್ ನಗರಕ್ಕೆ ಹೋಗುವ ರಸ್ತೆಯ ಪಕ್ಕದ ಲೇಔಟ್ ನಲ್ಲಿ  ಗಾಂಜಾ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಪಿಎಸ್ ಐ ಆಗಿರುವ ತಿರುಮಲೆಶ್  ಜಿ.  ನೇತೃತ್ವದ ತಂಡವು ದಾಳಿ ನಡೆಸಿ, ಆತನನ್ನು ಬಂಧಿಸಿದೆ.

tirumalesh

ತಿರುಮಲೆಶ್ ಜಿ. ಪಿಎಸ್ ಐ ತುಂಗಾನಗರ ಪೊಲೀಸ್  ಠಾಣೆ ಶಿವಮೊಗ್ಗ

ಬಂಧಿತನಿಂದ 90 ಸಾವಿರ ರೂ ಮೌಲ್ಯದ  1.100 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ .  ಬಂಧಿತ ಆರೋಪಿ ಅಬೀದ್ ನ ಮೇಲೆ ಶಿವಮೊಗ್ಗದ ದೊಡ್ಡಪೇಟೆ, ತುಂಗಾಠಾಣೆ, ಸಾಗರ ರೂರಲ್, ಭದ್ರಾವತಿಯ ಠಾಣೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರ ಪ್ರಕರಣಗಳು ದಾಖಲಾಗಿವೆ.

ಕಾರ್ಯಾಚರಣೆಯಲ್ಲಿ ಸೋಮಾ ನಾಯ್ಕ, ಸಂತೋಷ್, ಲಿಂಗರಾಜ್, ಅರುಣ್ ಕುಮಾರ್, ಲಂಕೇಶ್, ಪ್ರಶಾಂತ್ ಕುಮಾರ್, ಅರುಣ್, ಹರಿಯಂತ್, ಗುರುನಾಯ್ಕ್, ಸಯ್ಯದ್ ಇಮ್ರಾನ್, ರಾಜು, ಚಂದ್ರಾನಾಯಕ್ ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿ