ಪಳೆಯುಳಿಕೆಯ ಈ ಪ್ರಬೇಧದ ಬಗ್ಗೆ ನಿಮಗೆಷ್ಟು ತಿಳಿದಿದೆ? | ಮಣ್ಣಿನಡಿಯಲ್ಲಿಯೇ ವಾಸಿಸುವ ಈ ಜೀವಿ ಯಾವುದು ಗೊತ್ತಾ? - Mahanayaka

ಪಳೆಯುಳಿಕೆಯ ಈ ಪ್ರಬೇಧದ ಬಗ್ಗೆ ನಿಮಗೆಷ್ಟು ತಿಳಿದಿದೆ? | ಮಣ್ಣಿನಡಿಯಲ್ಲಿಯೇ ವಾಸಿಸುವ ಈ ಜೀವಿ ಯಾವುದು ಗೊತ್ತಾ?

09/11/2020

ತಿರುವನಂತಪುರಂ: ಮಣ್ಣಿನಡಿಯಲ್ಲಿಯೇ ಜೀವಿಸುವ ಅಪರೂಪದ ಕಪ್ಪೆಯೊಂದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದೇ ಇರಲಿಕ್ಕಿಲ್ಲ, ಈ ಜೀವ ವೈವಿದ್ಯವೇ ಅಷ್ಟೇ ಪ್ರತಿನಿತ್ಯ ಹೊಸ ಹೊಸ ಜೀವಿಗಳ ಪತ್ತೆಯಾಗುತ್ತಲೇ ಇರುತ್ತದೆ. ಕಪ್ಪೆಗಳ ಪ್ರಬೇಧದ ಹಳೆಯ ಪಳೆಯುಳಿಕೆ ಎಂದು ಹೇಳಲಾಗಿರುವ ಕಪ್ಪೆಯೊಂದು ಪತ್ತೆಯಾಗಿದೆ.

ಈ ಕಪ್ಪೆಗೆ ಇನ್ನಷ್ಟೇ ಹೆಸರು ಹುಡುಕುತ್ತಿದ್ದಾರೆ. ಹಂದಿಯ ಮೂತಿಯನ್ನೇ ಹೋಲುವ ಮೂತಿ, ಕಪ್ಪು ಮೈಬಣ್ಣ ಹೊಂದಿರುವ  ಕಪ್ಪೆಯು ನೋಡಲು ವಿಚಿತ್ರವಾಗಿದೆ. 2003ರ ಅಕ್ಟೋಬರ್ ನಲ್ಲಿ ತಿರುವನಂತಪುರದಲ್ಲಿ ಹಾಗೂ 2012ರ ಡಿಸೆಂಬರ್  ನಲ್ಲಿ ತಮಿಳುನಾಡಿನ ತ್ರಿಶೂರ್  ನಲ್ಲಿ ಈ ಪ್ರಬೇಧದ ಕಪ್ಪೆ ಪತ್ತೆಯಾಗಿದೆ.

ಈ ಕಪ್ಪೆಯು 7 ಸೆ.ಮೀ. ಮಣ್ಣಿನಡಿಯಲ್ಲಿ ಜೀವಿಸುತ್ತದೆ. ಇದು ತನ್ನ ಜೀವಮಾನವಿಡೀ ಮಣ್ಣಿನಡಿಯಲ್ಲಿಯೇ ಬದುಕುತ್ತದೆಯಂತೆ. ಮಳೆಗಾಲದಲ್ಲಿ ಮಾತ್ರವೇ ಇದು ಮಣ್ಣಿನಿಂದ ಹೊರ ಬರುತ್ತದೆ. ಅದೂ ಕೂಡ ಕೇವಲ 2 ವಾರಗಳವರೆಗೆ ಮಾತ್ರವೇ ಅವು ಮಣ್ಣಿನಿಂದ ಹೊರಬರುತ್ತವಂತೆ.


Provided by

ಈ ಕಪ್ಪೆಗೆ ಇನ್ನೂ ಯಾವುದೇ ಹೆಸರುಗಳನ್ನಿಡಲಾಗಿಲ್ಲ. ಈ ಬಗ್ಗೆ ಪರಿಸರ ಸಂರಕ್ಷಕರು ಯೋಚಿಸುತ್ತಿದ್ದಾರೆ. ಹಾಗೆಯೇ ಈ ಪ್ರಬೇಧದ ಕಪ್ಪೆಗಳನ್ನು ಉಳಿಸಲು ವನ್ಯಜೀವಿ ಸಂರಕ್ಷಣಾ ಮಂಡಳಿ ದುಡಿಯುತ್ತಿದೆ. ಇದೊಂದು ಪಳೆಯುಳಿಕೆ ಪ್ರಬೇಧವಾಗಿದೆ ಎಂದೇ ಪರಿಸರ ತಜ್ಞರು ಹೇಳುತ್ತಿದ್ದಾರೆ.

ಇತ್ತೀಚಿನ ಸುದ್ದಿ