ಕಸ ವಿಲೇವಾರಿ ವಾಹನ ಬಂದಿಲ್ಲವೆಂದು ಗ್ರಾಮ ಪಂಚಾಯತ್ ಬಾಗಿಲಿಗೆ ಕಸ ಸುರಿದ ಭೂಪ!
ಕೊಟ್ಟಿಗೆಹಾರ: ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನ ಸಮಯಕ್ಕೆ ಸರಿಯಾಗಿ ಬಂದಿಲ್ಲವೆಂದು ಮನೆಯ ಕಸವನ್ನು ಗ್ರಾಮ ಪಂಚಾಯತ್ ಬಾಗಿಲಿಗೆ ಸುರಿದ ಘಟನೆ ಬಣಕಲ್ ಗ್ರಾಮ ಪಂಚಾಯತ್ ಯಲ್ಲಿ ನಡೆದಿದೆ
ಗ್ರಾಮ ಪಂಚಾಯಿತಿಯ ವಾಹನ ದಿನಕ್ಕೆ ಎರಡು ಬಾರಿ ಬರುತ್ತಿದ್ದು ಮನೆಮಾಲೀಕರು ವಾಹನ ಬಂದ ಸಮಯಕ್ಕೆ ಸರಿಯಾಗಿ ಬಾರದೆ ಈ ರೀತಿ ಕೃತ್ಯ ವ್ಯಸಗಿದ್ದಾರೆ ಎಂದು ಸಮಾಜ ಸೇವಕ ಆರಿಫ್ ಆರೋಪಿಸಿದ್ದಾರೆ
ಬಣಕಲ್ ಗ್ರಾಮ ಪಂಚಾಯಿತಿಯ ಕಸ ವಿಲೇವಾರಿ ವಾಹನಕ್ಕೆ ಚಾಲಕರಿಲ್ಲದೆ ಸಮಾಜ ಸೇವಕ ಆರೀಫ್ ಅವರೇ ಸಮಾಜ ಸೇವೆಯ ದೃಷ್ಟಿಯಿಂದ ಕಸ ವಿಲೇವಾರಿ ವಾಹನವನ್ನು ಚಲಾಯಿಸುತ್ತಿದ್ದು, ಇವರು ದಿನಕ್ಕೆ ಎರಡು ಬಾರಿ ಬಂದರು ಈ ವ್ಯಕ್ತಿ ಮಾತ್ರ ಈ ರೀತಿ ಮಾಡಿರುವುದು ಗ್ರಾಮಸ್ಥರಿಲ್ಲರಿಗೂ ಬೇಸರ ತರಿಸಿದೆ ಎಂದು ಗ್ರಾಮಸ್ಥರಾದ ಗಂಗು, ಅಸಮಾಧಾನ ಹೊರಹಾಕಿದರು.
ಆರೀಫ್ ಅವರಿಗೆ ಫೋನ್ ಮಾಡಿ ಹೇಳಿದ್ದರೆ ಮರುದಿನ ಕಸವನ್ನು ಅವರು ತೆಗೆದುಕೊಂಡು ಹೋಗುತ್ತಿದ್ದರು ಈ ರೀತಿ ಮಾಡಿರುವುದು ಸರಿಯಲ್ಲ ಎಂದರು.
ಕಸ ಎಸೆದ ವ್ಯಕ್ತಿ ಮಣಿಕಂಠ ಮಾತಾಡಿ, ನಮ್ಮ ಮನೆ ಸಮೀಪ ಕಸ ವಿಲೇವಾರಿ ವಾಹನ ನಿಲ್ಲಿಸದೆ ಹೋಗಿದ್ದರಿಂದ ನಾನು ಗ್ರಾಮ ಪಂಚಾಯತ್ ಎದುರಿಗೆ ನಾನು ಗ್ರಾಮ ಪಂಚಾಯಿತಿಗೆ ಕಸವನ್ನು ಹಾಕಿದ್ದೇನೆ ಎಂದು ಸಮರ್ಥಿಸಿಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: