ಇಂದಿನಿಂದ ಅಡುಗೆ ಅನಿಲ ದುಬಾರಿ: ಪ್ರತಿ ಸಿಲಿಂಡರ್ ಗೆ ಎಷ್ಟು ಏರಿಕೆಯಾಗಿದೆ ಗೊತ್ತಾ? - Mahanayaka

ಇಂದಿನಿಂದ ಅಡುಗೆ ಅನಿಲ ದುಬಾರಿ: ಪ್ರತಿ ಸಿಲಿಂಡರ್ ಗೆ ಎಷ್ಟು ಏರಿಕೆಯಾಗಿದೆ ಗೊತ್ತಾ?

gas cylinder
01/07/2021

ನವದೆಹಲಿ: ಅಡುಗೆ ಅನಿಲ ಮತ್ತೆ ಜನರಿಗೆ ದುಬಾರಿಯಾಗಿದ್ದು, ನಾಲ್ಕು ಮೆಟ್ರೋ ನಗರಗಳಲ್ಲಿ ಜುಲೈ 1 ರಿಂದ ಜಾರಿಗೆ ಬರುವಂತೆ ಎಲ್‌ ಪಿಜಿ ಬೆಲೆಯನ್ನು ರೂ. 25.50 ಹೆಚ್ಚಿಸಲಾಗಿದೆ.

ದಿಲ್ಲಿ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಸಬ್ಸಿಡಿ ರಹಿತ ಎಲ್‌ ಪಿಜಿಯ ಬೆಲೆ ಪ್ರತಿ ಸಿಲಿಂಡರ್‌ಗೆ ರೂ. 834.50 ಆಗಿರುತ್ತದೆ. (14.2 ಕಿಲೋಗ್ರಾಂ) ಎಂದು ಭಾರತೀಯ ತೈಲ ನಿಗಮದ ವೆಬ್‌ಸೈಟ್ – iocl.com ತಿಳಿಸಿದೆ ಎಂದು ವರದಿಯಾಗಿದೆ.

ಇತ್ತೀಚಿನ ಏರಿಕೆಯೊಂದಿಗೆ ಎಲ್‌ ಪಿಜಿ ಸಿಲಿಂಡರ್‌ನ ಬೆಲೆ ಚೆನ್ನೈನಲ್ಲಿ ಅತಿ ಹೆಚ್ಚು ರೂ.850.50 ಆಗಿದೆ. ಕಳೆದ ಆರು ತಿಂಗಳಲ್ಲಿ 14.2 ಕೆಜಿ ಎಲ್‌ ಪಿಜಿ ಸಿಲಿಂಡರ್‌ಗೆ ರೂ. 140 ರಷ್ಟು ಏರಿಕೆಯಾಗಿದೆ.  19 ಕೆಜಿ ವಾಣಿಜ್ಯ ಸಿಲಿಂಡರ್‌ ನ ಬೆಲೆಯನ್ನು ರೂ. 76 ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದೆಡೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯ ನಡುವೆಯೇ ಜನರಿಗೆ ಸರ್ಕಾರ ಇನ್ನೊಂದು ಬರೆ ಎಳೆದಿದ್ದು, ಅಡುಗೆ ಅನಿಲಗಳ ಬೆಲೆ ಏರಿಕೆ ತೀವ್ರವಾಗಿದೆ. ಇನ್ನು ಆಹಾರ ಪದಾರ್ಥಗಳ ಬೆಲೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಇಂತಹ ಸ್ಥಿತಿ ದೇಶಕ್ಕೆ ಬಂದಿರುವುದರಿಂದ ಜನರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ